ಹೆಲ್ತ್ ಟಿಪ್ಸ್:
ಪೈನಾಪಲ್ ಕತ್ತರಿಸಿಕೊಂಡು ಅದಕ್ಕೆ ಹೆಚ್ಚಿದ ಸೇಬು, ಸೌತೆಕಾಯಿ ಹಾಕಬೇಕು. ಜೊತೆಯಲ್ಲಿ ಹಸಿಶುಂಠಿ, ಲಿಂಬೆರಸ, ಎರಡು ಚಿಟಿಕೆ ಅರಿಶಿಣ ಸೇರಿಸಿ ಮಿಕ್ಸಿಗೆ ಹಾಕಿ ಜ್ಯೂಸ್ ತಯಾರಿಸಿಕೊಳ್ಳಬೇಕು. ಇದನ್ನು ದಿನಕ್ಕೆ ಎರಡು ಬಾರಿ ಕುಡಿಯುತ್ತ ಬಂದಲ್ಲಿ ನೋವನ್ನು ಕಡಿಮೆ ಮಾಡಲು ಸಹಕಾರಿ. ಇದರಲ್ಲಿನ ಸೌತೆಕಾಯಿಯು ಡಿಹೈಡ್ರೇಶನ್ ತಡೆಯುತ್ತದೆ. ಈ ಪೇಯದ ಸೇವನೆ ನೋವು ನಿವಾರಣೆಗೆ ಸಹಕಾರಿ. ಒಂದಿಂಚು ಹಸಿ ಶುಂಠಿಯನ್ನು ಜಜ್ಜಿ ಒಂದು ಲೋಟ ನೀರಿನಲ್ಲಿ ಹಾಕಿ ಸೋಸಿ, ಅದು ಸ್ವಲ್ಪ ತಣ್ಣಗಾದ ನಂತರ ಜೇನುತುಪ್ಪ ಸೇರಿಸಿ ಸೇವಿಸಬೇಕು. ವಿವಿಧ ರೀತಿಯ ಗಂಟುನೋವುಗಳಿಂದ ಬಳಲುವವರು ದಿನಕ್ಕೆ 3ರಿಂದ 4 ಬಾರಿ ಈ ಜಿಂಜರ್ ಟೀ ಮಾಡಿ ಸೇವಿಸಬೇಕು.
ಪೈನಾಪಲ್‌ನಲ್ಲಿ ಬ್ರೊಮಿಲಿನ್ ಎಂಬ ಅಂಶವಿದೆ. ಇದು ಶುಂಠಿಯ ಜೊತೆ ಸೇರಿ ಪರಿಣಾಮಕಾರಿ ನೋವು ನಿವಾರಕವಾಗಿ ಕೆಲಸ ಮಾಡಬಲ್ಲುದು. ಪೈನಾಪಲ್, ಶುಂಠಿ, ಸೌತೆಕಾಯಿ, ಸೇಬು, ಲಿಂಬೆರಸ ಹಾಗೂ ಅರಿಶಿಣವನ್ನು ಒಟ್ಟಾಗಿ ಉಪಯೋಗಿಸಿ ಮಾಡುವ ಒಂದು ಪರಿಣಾಮಕಾರಿ ಮನೆಮದ್ದು……