Breaking News

ಸರಕಾರ ಉಳಿಸಿಕೊಳ್ಳಲು ಕೈ ಹೈಕಮಾಂಡ್ ಕಸರತ್ತು..!

ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಬೆಂಗಳೂರಿಗೆ ದೌಡು....

SHARE......LIKE......COMMENT......

ಬೆಂಗಳೂರು:

ರಾಜ್ಯದಲ್ಲಿ ಎಂಎಲ್​​ಗಳ ರಾಜೀನಾಮೆ ಪರ್ವದ ಭೀತಿ ಎದುರಾಗಿದ್ದು ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್​ ಹೈಕಮಾಂಡ್ ಅಲರ್ಟ್ ಆಗಿದೆ. ಸರ್ಕಾರ ಉಳಿಸಿಕೊಳ್ಳೋಕೆ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಇಂದು ಬೆಂಗಳೂರಿಗೆ ದೌಡಾಯಿಸಲಿದ್ದಾರೆ. ​ಸಂಜೆ 4 ಗಂಟೆಗೆ ಬರಲಿರೋ ವೇಣುಗೋಪಾಲ್​​ ರಾಜ್ಯ ಕಾಂಗ್ರೆಸ್​ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿಗೂ ವೇಣುಗೋಪಾಲ್ ಬುಲಾವ್ ನೀಡಿದ್ದಾರೆ. ರಮೇಶ್​​ ಜಾರಕಿಹೊಳಿ ಕೆಸಿವಿ ಸೂಚನೆ ಪಾಲಿಸ್ತಾರ..? ಧಿಕ್ಕರಿಸ್ತಾರ ಅನ್ನೋದನ್ನು ಕಾದು ನೋಡ್ಬೇಕು……