ಹಾಟ್ ಸ್ಪೈಸಿ ಬಟಾಣಿ ಪನ್ನೀರ್ ಗ್ರೇವಿ ಮಾಡುವ ವಿಧಾನಗಳು
ಬೇಕಾಗುವ ಪದಾರ್ಥಗಳು:
- ಬಟಾಣಿ- 200 ಗ್ರಾಂ
- ಪನ್ನೀರ್ – 200 ಗ್ರಾಂ
- ಎಣ್ಣೆ- ಸ್ವಲ್ಪ
- ಶುಂಠಿ – ಸಣ್ಣಗೆ ಕತ್ತರಿಸಿದ್ದು ಸ್ವಲ್ಪ
- ಬೆಳ್ಳುಳ್ಳಿ- 5-6 ಎಸಳು
- ಈರುಳ್ಳಿ – 1 ಬಟ್ಟಲು (ಸಣ್ಣಗೆ ಹೆಚ್ಚಿದ್ದು)
- ಗೋಡಂಬಿ – 4-5
- ಟೊಮೆಟೊ – 3 (ಸಣ್ಣಗೆ ಹೆಚ್ಚಿದ್ದು)
- ಒಣಗಿದ ಮೆಣಸಿನ ಕಾಯಿ- ಬಿಸಿನೀರಿನಲ್ಲಿ ನೆನಿಸಿದ್ದು 4-5
- ಜೀರಿಗೆ – 1 ಚಮಚ
- ಅರಿಶಿನ ಪುಡಿ- ಚಿಟಿಕೆಯಷ್ಟು
- ಅಚ್ಚ ಖಾರದ ಪುಡಿ – ಅರ್ಧ ಚಮಚ
- ದನಿಯಾ ಪುಡಿ – ಅರ್ಧ ಚಮಚ
- ಗರಂ ಮಸಾಲೆ ಪುಡಿ – ಕಾಲು ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಮೊದಲಿಗೆ ಬಾಣಲೆಗೆ ಎಣ್ಣೆಯನ್ನು ಹಾಕಿ ಮಧ್ಯಮ ಗಾತ್ರದಲ್ಲಿ ಕತ್ತರಿಸಿದ ಪನ್ನೀರ್ ಗಳನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
- ನಂತರ ಅದೇ ಪ್ಯಾನ್ ನಲ್ಲಿಯೇ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಗೋಡಂಬಿ, ಟೊಮೆಟೊವನ್ನು ಹಾಕಿ ಚೆನ್ನಾಗಿ ಕೆಂಪಗೆ ಹುರಿದುಕೊಂಡು ತಣ್ಣಗಾಗಲು ಬಿಡಬೇಕು. ನಂತರ ಒಣಗಿದ ಮೆಣಸಿನ ಕಾಯಿಯನ್ನು ಹಾಕಿ ರುಬ್ಬಿಕೊಳ್ಳಬೇಕು.
- ಬಳಿಕ ಪ್ಯಾನ್ ವೊಂದಕ್ಕೆ 1 ಚಮಚ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಅರಿಶಿನ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ, ಗರಂ ಮಸಾಲೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಬಟಾಣಿ ಹಾಕಿ ಹಾಗೂ ಸ್ವಲ್ಪ ನೀರು ಹಾಕಿ 8-10 ನಿಮಿಷ ಬೇಯಲು ಬಿಡಬೇಕು. ಬಟಾಣಿ ಬೆಂದ ನಂತರ ಈ ಹಿಂದೆ ಹುರಿದಿಟ್ಟುಕೊಂಡ ಪನ್ನೀರ್ ಹಾಕಿ 3-5 ನಿಮಿಷ ಬೇಯಿಸಿದರೆ, ರುಚಿಕರವಾದ ಬಟಾಣಿ ಪನ್ನೀರ್ ಸವಿಯಲು ಸಿದ್ಧ.
ಬಟಾಣಿ ಪನ್ನೀರ್ ಗ್ರೇವಿ ಮಾಡುವ ಸುಲಭ ವಿಧಾನಗಳು:
- ಬಳಿಕ ಪ್ಯಾನ್ ವೊಂದಕ್ಕೆ 1 ಚಮಚ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಅರಿಶಿನ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ, ಗರಂ ಮಸಾಲೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಬಟಾಣಿ ಹಾಕಿ ಹಾಗೂ ಸ್ವಲ್ಪ ನೀರು ಹಾಕಿ 8-10 ನಿಮಿಷ ಬೇಯಲು ಬಿಡಬೇಕು. ಬಟಾಣಿ ಬೆಂದ ನಂತರ ಈ ಹಿಂದೆ ಹುರಿದಿಟ್ಟುಕೊಂಡ ಪನ್ನೀರ್ ಹಾಕಿ 3-5 ನಿಮಿಷ ಬೇಯಿಸಿದರೆ, ರುಚಿಕರವಾದ ಹಾಟ್ ಸ್ಪೈಸಿ ಬಟಾಣಿ ಪನ್ನೀರ್ ಗ್ರೇವಿ ರೆಡಿ……