ನವದೆಹಲಿ:
ದೇಶದ ಜನತೆಗೆ ಹೊಸ ವರ್ಷಕ್ಕಾಗಿ ಮೋದಿ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ …ಯೆಸ್ ಕೇಂದ್ರ ಸರ್ಕಾರ ಎಲ್‌ಪಿಜಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಸಬ್ಸಿಡಿ ಸಹಿತ 14 ಕೆಜಿ ತೂಕದ ಸಿಲಿಂಡರ್ ಬೆಲೆಯಲ್ಲಿ 5.91 ರು.ಗಳ ಕಡಿತ ಮಾಡಿದ್ದು ,ಇದರೊಂದಿಗೆ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ 494.99 ರುಪಾಯಿಗೆ ಸಿಗಲಿದೆ.
ಇನ್ನು ಸಬ್ಸಿಡಿ ರಹಿತ ಎಲ್‌ಪಿಜಿ ದರ 120.50 ರುಪಾಯಿ ಕಡಿಮೆ ಮಾಡಲಾಗಿದ್ದು ಸದ್ಯದ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 689 ರುಪಾಯಿ ಆಗಿದೆ.ಇದು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ….