Breaking News

ಅಂಗಡಿಗಳನ್ನು ಸೀಜ್​ ಮಾಡಿಸಿದ್ದ ಪಂಚಾಯತ್​ ಸದಸ್ಯರು..!

ಬಾಡಿಗೆ ಕೊಡದೆ 2 ರಿಂದ 3 ಲಕ್ಷ ರೂಪಾಯಿ ಲಾಸ್....

SHARE......LIKE......COMMENT......

ಕೊರಟಗೆರೆ:

ಬಾಡಿಗೆ ಕೊಡದ ಅಂಗಡಿ ಮಾಲಿಕರ ವಿರುದ್ಧ ಪಂಚಾಯತ್​ ಸದಸ್ಯರು ಸ್ವತಃ ತಾವೇ ಫೀಲ್ಡ್​​ಗಿಳಿದು ಅಂಗಡಿಗಳನ್ನು ಖಾಲಿ ಮಾಡಿಸಿದ್ದಾರೆ. ಕೊರಟಗೆರೆ ತೋವಿನಕಡೆ ಗ್ರಾಮ ಪಂಚಾಯತ್​ಗೆ ಸೇರಿದ್ದ 20ಕ್ಕೂಹೆಚ್ಚುಅಂಗಡಿಗಳ ಬಾಡಿಗೆದಾರರು ಕಳೆದೆರಡು ವರ್ಷಗಳಿಂದ ಸರಿಯಾಗಿ ಬಾಡಿಗೆ ಕೊಡದೇ ಮೋಸ ಮಾಡ್ತಿದ್ರಂತೆ.

ಇದ್ರಿಂದ ಗ್ರಾಮ ಪಂಚಾಯತ್​ಗೆ ವರ್ಷಕ್ಕೆ 2 ರಿಂದ 3 ಲಕ್ಷ ರೂಪಾಯಿ ಲಾಸ್​ ಆಗ್ತಿತ್ತು. ಬಾಡಿಗೆ ಕೊಡ್ತಿಲ್ಲ ಅಂತ ನೋಟಿಸ್​ ಕಳುಹಿಸಿದ್ರು ಅಂಗಡಿ ಮಾಲಿಕರು ಕ್ಯಾರೆ ಅಂತಿರಲಿಲ್ವಂತೆ. ಇದ್ರಿಂದ ತಾಳ್ಮೆ ಕಳೆದುಕೊಂಡ ಪಂಚಾಯತ್​ ಸದಸ್ಯರು ಹಾಗೂ ಸಿಬ್ಬಂದಿ ಖುದ್ದು ತಾವೇ ಅಂಗಡಿಗಳನ್ನು ಖಾಲಿ ಮಾಡಿಸಿ ಸೀಜ್​ ಮಾಡಿದ್ದಾರೆ……