ಬೆಂಗಳೂರು:
ಆಮಿತ್ ಶಾಗೆ ಆಪರೇಷನ್ ಕಮಲ ಮಾಡಲು ಹೋಗಿ ಎಚ್1 ಎನ್1 ಸೋಂಕು ತಗುಲಿದೆ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ನೀಡಿದ್ದ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಮೌರ್ಯ ಸರ್ಕಲ್ನಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡುವ ವೇಳೆ ಹರಿಪ್ರಸಾದ್ ಈ ರೀತಿ ಹೇಳಿಕೆ ನೀಡಿದ್ದರು ,ಬಿಜೆಪಿಗೆ ರಫೇಲ್ ಡೀಲ್ನಲ್ಲಿ 30 ಸಾವಿರ ಕೋಟಿ ಹಣ ಹೊಡೆದಿದೆ. ಈ ಹಣದ ಅಹಂಕಾರದಲ್ಲಿ ಸರಕಾರ ಬೀಳಿಸಲು ಮುಂದಾಗಿತ್ತು. ಲಕ್ಷ ಕೋಟಿ ಹಣ ಬಂದರೂ ಸರ್ಕಾರ ಬೀಳಿಸಲು ಸಾಧ್ಯವಿಲ್ಲ. ಸರ್ಕಾರ ಬೀಳಿಸಲು ಹೋಗಿ ಶಾ ಗೆ ಹಂದಿ ಜ್ವರ ಬಂದಿದೆ, ಮೈತ್ರಿ ಸರ್ಕಾರದ ಪತನಕ್ಕೆ ಯತ್ನಿಸಿದ್ದಕ್ಕೆ ವಾಂತಿ, ಬೇಧಿಯೂ ಶುರುವಾಗುತ್ತದೆ ಎಂದರು.
ಈ ಹೇಳಿಕೆ ವಿವಾದಕ್ಕೆ ಬಿಜೆಪಿಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಕೆ.ವಿಜಯವರ್ಗೀಯ ಮಾತನಾಡಿ , ಇದು ಅಮಾನವೀಯ ವರ್ತನೆ. ನಾನು ಕೇಳಲೆ ಸೋನಿಯಾ ಅವರಿಗೆ ಯಾವ ಸಮಸ್ಯೆ ಇದೆ ಎಂದು. ಅವರು ಅನಾರೋಗ್ಯಕ್ಕೀಡಾಗಿದ್ದಾರೆ, ನಮಗೆ ಹೇಳಿಲ್ಲ.ಈ ರೀತಿಯ ಹೇಳಿಕೆ ಒಳ್ಳೆಯದಲ್ಲ. ಯಾರೇ ಆಗಲಿ ಆರೋಗ್ಯ ವಿಚಾರಕ್ಕೆ ಸ್ವಲ್ಪ ಕರುಣೆ ಇರಬೇಕು ಮತ್ತು ಅವರಿಗಾಗಿ ಪ್ರಾರ್ಥಿಸಬೇಕು. ನಾನು ಈ ರೀತಿಯ ಪದ ಬಳಕೆಯನ್ನು ಖಂಡಿಸುತ್ತೇನೆ ಎಂದರು
ಇನ್ನು ಆಮಿತ್ ಶಾ ಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಮುಂದುವರಿಸಿದ್ದು, ಇನ್ನೊಂದು ದಿನ ಅಥವಾ ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ…..