Breaking News

ಅಪ್ಪಾಜಿ ಬಯೋಪಿಕ್‌ನಲ್ಲಿ ಪುನೀತ್ ನಟನೆ ..!?

ಎನ್‌ಟಿಆರ್‌– ಕಥಾನಾಯಕುಡು ಟ್ರೇಲರ್ ಬಿಡುಗಡೆ ಮಾಡಿ ಪುನೀತ್ ಹೇಳಿಕೆ....

SHARE......LIKE......COMMENT......

ಸಿನಿಮಾ:

ನಂದಮೂರಿ ಬಾಲಕೃಷ್ಣ ನಟನೆಯ ತೆಲುಗಿನ ‘ಎನ್‌ಟಿಆರ್‌– ಕಥಾನಾಯಕುಡು’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಪುನೀತ್ ರಾಜ್ ಕುಮಾರ್ “ಅಪ್ಪಾಜಿಯ ಬಯೋಪಿಕ್‌ನಲ್ಲಿ ನಟಿಸುವೆ ಎಂದು ಆಸೆ ವ್ಯಕ್ತ ಪಡಿಸಿದರು ..ನಂದಮೂರಿ ಬಾಲಕೃಷ್ಣ  ಅವರು ತನ್ನಪ್ಪ ಎನ್‌.ಟಿ. ರಾಮರಾವ್‌ ಅವರ ಜೀವನ ಚರಿತ್ರೆ ಕುರಿತ ಚಿತ್ರದಲ್ಲಿ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಪುತ್ರನೊಬ್ಬ ತನ್ನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಬಾಲಣ್ಣ ಆ ಸಾಧನೆ ಮಾಡಿದ್ದಾರೆ. ನನಗೂ ಅಪ್ಪಾಜಿಯ ಬಯೋಪಿಕ್‌ನಲ್ಲಿ ನಟಿಸುವ ಆಸೆಯಿದೆ. ರಾಜ್‌ಕುಮಾರ್‌ ಅವರ ಜೀವನ, ಸಾಧನೆ ಅನನ್ಯವಾದುದು. ಅದನ್ನು ತೆರೆಯ ಮೇಲೆ ಕಟ್ಟಿಕೊಡಲು ಸಾಕಷ್ಟು ಶ್ರಮವಹಿಸಬೇಕಿದೆ’ ಎಂದರು ಪುನೀತ್‌.‘ಅಪ್ಪಾಜಿಯ ಜೀವನವನ್ನು ದೃಶ್ಯರೂಪಕ್ಕೆ ಇಳಿಸಲು ನಿರ್ದೇಶಕರು, ನಿರ್ಮಾಪಕರು ಮುಂದೆ ಬಂದರೆ ಖಂಡಿತ ನಟಿಸುತ್ತೇನೆ” ಎಂದು ಹೇಳಿದರು.

ಇದೇ ಸಮಯದಲ್ಲಿ ನಂದಮೂರಿ ಬಾಲಕೃಷ್ಣ ಮಾತನಾಡಿ  ‘ರಾಜ್‌ಕುಮಾರ್‌ ಅವರ ಬಯೋಪಿಕ್‌ನಲ್ಲಿ ಪುನೀತ್‌ ನಟಿಸಬೇಕು. ಇದನ್ನು ಅಣ್ಣಾವ್ರ ಅಭಿಮಾನಿಗಳು ಇಷ್ಟಪಡುತ್ತಾರೆ’ ಎಂದು ಹೇಳಿದರು…..