Breaking News

ಅಮೃತಸರ ದಸರಾ ರೈಲು ದುರಂತಕ್ಕೆ ಕಾಂಗ್ರೆಸ್‌ ಕಾರಣ..!?

ಅನುಮತಿ ಪಡೆಯದೆ ಕಾರ್ಯಕ್ರಮ ಆಯೋಜನೆ..?

SHARE......LIKE......COMMENT......

ಅಮೃತಸರ/ಪಂಜಾಬ್‌:

ಅಮೃತಸರದಲ್ಲಿ ಶುಕ್ರವಾರ ಸಂಜೆ 60ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ರೈಲು ದುರಂತಕ್ಕೆ ಕಾಂಗ್ರೆಸ್‌ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಅನುಮತಿಯನ್ನೇ ಪಡೆಯದೆ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಜೋದಾ ಫಾಟಕ್‌ನಲ್ಲಿ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಪಂಜಾಬ್‌ ಸಚಿವ ನವಜೋತ್‌ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರು, ದುರಂತದ ಬಳಿಕ ಗಾಯಾಳುಗಳಿಗೆ ನೆರವಾಗುವುದು ಬಿಟ್ಟು, ಸ್ಥಳದಿಂದ ಕಾಲು ಕಿತ್ತರು ಎಂದು ಹಲವು ಪ್ರತ್ಯಕ್ಷದರ್ಶಿಗಳು ಗಂಭೀರ ಆಪಾದನೆ ಮಾಡಿದ್ದಾರೆ.  ಆದರೆ ಆರೋಪ ನಿರಾಕರಿಸಿರುವ ಕೌರ್‌, ಘಟನೆ ನಡೆಯುವ ಮುನ್ನವೆ ತಾವು ಸ್ಥಳದಿಂದ ನಿರ್ಗಮಿಸಿದ್ದಾಗಿ ಹೇಳಿದ್ದಾರೆ

ಅಮೃತಸರದ ಚೋರಾ ಬಜಾರ್ ಸಮೀಪ ವಿಜಯದಶಮಿ ಆಚರಣೆ ನಡೆಯುತ್ತಿದ್ದು, ರಾವಣನ ಪ್ರತಿಕೃತಿ ದಹಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ನೂರಾರು ಜನರು ರೈಲ್ವೆ ಹಳಿಯಲ್ಲಿ ನಿಂತುಕೊಂಡು ಅದನ್ನು ವೀಕ್ಷಿಸುತ್ತಿದ್ದರು,ಪ್ರತಿಕೃತಿ ದಹನದ ಬಳಿಕ ಜ್ವಾಲೆಯ ಬಿಸಿ ತಾಗುವ ಭೀತಿಯಿಂದ ಅಲ್ಲಿಯವರೆಗೂ ಪ್ರತಿಕೃತಿ ಹತ್ತಿರ ನಿಂತಿದ್ದವರೂ ದೂರದ ರೈಲ್ವೆ ಹಳಿಗಳತ್ತ ಬಂದು ನಿಂತಿದ್ದರು.ಗುಂಪು ಗುಂಪಾಗಿ ರೈಲ್ವೆ ಹಳಿಯತ್ತ ಸಾಗಿದರು. ಅದೇ ಸಮಯದಲ್ಲಿ ರೈಲು ಆಗಮಿಸಿದ್ದು,ಸಂಭ್ರಮದಲ್ಲಿದ್ದ ಜನತೆ ರೈಲನ್ನು ಗಮನಿಸಿಲ್ಲ,ಅದೇ ವೇಳೆ ವೇಗವಾಗಿ ಬಂದ ಜಲಂಧರ್‌-ಅಮೃತ್‌ಸರ ರೈಲು ಜನರ ಮೇಲೆ ಹಾದು ಹೋಗಿದೆ. ಮತ್ತೊಂದು ಹಳಿಯ ಮೇಲೂ ರೈಲು ಆಗಮಿಸಿದ್ದರಿಂದ ತಪ್ಪಿಸಿಕೊಳ್ಳಲು ಅವಕಾಶವೇ ಸಿಗಲಿಲ್ಲ. ಹೀಗಾಗಿ ಬಹಳಷ್ಟು ಮಂದಿ ಅಸಹಾಯಕರಾಗಿ ರೈಲಿನ ಚಕ್ರಗಳಿಗೆ ಸಿಲುಕಿ ಸಾವನ್ನಪ್ಪಿದ್ದರು……