Breaking News

ಏರ್‌ಸ್ಟ್ರೈಕ್‌ನಲ್ಲಿ ನಮ್ಮ ಗುರಿ ಯಶಸ್ವಿಯಾಗಿದೆ.

ವಾಯುಪಡೆ ಮುಖ್ಯಸ್ಥ ಬಿ.ಎಸ್ ಧನೋವಾ ಸ್ಪಷ್ಟನೆ....

SHARE......LIKE......COMMENT......

ಕೊಯಮತ್ತೂರು:

ಭಾರತೀಯ ವಾಯುಪಡೆ ಏರ್‌ಸ್ಟ್ರೈಕ್‌  ನಡೆಸಿದ ಬಳಿಕ ಹುಟ್ಟಿಕೊಂಡ ಕೆಲವು ಪ್ರಶ್ನೆಗಳಿಗೆ ವಾಯುಪಡೆ ಮುಖ್ಯಸ್ಥ ಬಿ.ಎಸ್‌. ಧನೋವಾ ಉತ್ತರಿಸಿದ್ದು, ದಾಳಿಯನ್ನು ಶಂಕಿಸುತ್ತಿರುವವರಿಗೆ ಸೂಕ್ತ ಉತ್ತರ ಇಂದು ನೀಡಿದ್ದರು.

ಏರ್‌ಸ್ಟ್ರೈಕ್‌ ಯೋಜಿತ ಕಾರ್ಯಾಚರಣೆ,ದಾಳಿಯಲ್ಲಿ ಎಷ್ಟು ಮಂದಿ ಸತ್ತಿದ್ದಾರೆ ಎಂದು ವಾಯುಪಡೆ ಲೆಕ್ಕ ಹಾಕುವುದಿಲ್ಲ. ಆ ಕೆಲಸ ಸರಕಾರ ಮಾಡುತ್ತದೆ,ದಾಳಿಯ ಗುರಿ ಯಾವುದಾಗಿತ್ತು ಎಂಬುದನ್ನು ವಿದೇಶಾಂಗ ಕಾರ್ಯದರ್ಶಿ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ನಾವು ನಮ್ಮ ಗುರಿಯನ್ನು ಧ್ವಂಸ ಮಾಡಲು ನಿರ್ಧರಿಸಿದ್ದೆವು. ಅದನ್ನು ಮಾಡಿ ಮುಗಿಸಿದ್ದೇವೆ. ಕಾಡಿನಲ್ಲಿ ನಾವು ಬಾಂಬ್ ಹಾಕಿ ಬಂದಿದ್ದರೆ ಇಲ್ಲವಾದರೆ ಪಾಕ್ ಪ್ರಧಾನಿ ಯಾಕೆ ಪ್ರತಿಕ್ರಿಯಿಸುತ್ತಿದ್ದರು ಎಂದರು.

ವಿಂಗ್ ಕಮಾಂಡರ್ ಅಭಿನಂದನ್ ಬಗ್ಗೆ ಮಾತನಾಡುತ್ತಾ ಅವರು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಟ್ಟಿದ್ದಾರೆ. ಅಗತ್ಯವಿರುವ ಚಿಕಿತ್ಸೆಗಳನ್ನು ಕೊಡಲಾಗುತ್ತಿದೆ ಅವರು ವೈದ್ಯಕೀಯವಾಗಿ ಸಮರ್ಥರು ಎಂಬ ವರದಿ ಬಂದ ಬಳಿಕ ಯುದ್ಧ ವಿಮಾನವನ್ನು ಮತ್ತೆ  ಏರಲಿದ್ದಾರೆ ಎಂದು ಮಾಹಿತಿ ನೀಡಿದರು……