ಬಂಗಾಳಕೊಲ್ಲಿ:
ಮತ್ತೊಂದು ಚಂಡಮಾರುತ ಹುಟ್ಟುಕೊಂಡಿದೆ. ಇದು ಬಂಗಾಳಕೊಲ್ಲಿಯಲ್ಲಿ ಹುಟ್ಟುತ್ತಿರುವ ಈ ವರ್ಷದ ಮೂರನೇ ಸೈಕ್ಲೋನ್. ಆದರೆ, ಭಾರತಕ್ಕೆ ಅಪ್ಪಳಿಸುತ್ತಿರುವ ಏಳನೇ ಸೈಕ್ಲೋನ್ ಇದಾಗಿದೆ. ಭಾರತದ ಪೂರ್ವ ಭಾಗದಲ್ಲಿ ಕಾಣಿಸಿಕೊಳ್ಳಲಿರುವ ಸೈಕ್ಲೋನ್‌ಗೆ ಬುಲ್ ಬುಲ್ ಅಂತ ಹೆಸರಿಡಲಾಗುತ್ತಿದೆ. ಶುಕ್ರವಾರದಿಂದ ಬುಲ್ ಬುಲ್ ರುದ್ರನರ್ತನ ಆರಂಭವಾಗಲಿದೆ. ಜೊತೆಗೆ ಆಂಧ್ರ ಕರಾವಳಿ ಮತ್ತು ಪಶ್ಚಿಮ ಬಂಗಾಳದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಬಾಂಗ್ಲಾದೇಶವನ್ನೂ ವ್ಯಾಪಿಸಲಿದೆ. ಕರ್ನಾಟಕದ ಮೇಲೆ ಬುಲ್ ಬುಲ್ ಎಫೆಕ್ಟ್ ಸಾಧ್ಯತೆ ಕಡಿಮೆಯಿದ್ದರೂ ಹಿಂದೂ ಮಹಾಸಾಗರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಯಲ್ಲಿ ಶುಕ್ರವಾರದ ಬಳಿಕ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ……