ಹುಬ್ಬಳ್ಳಿ:
ರಾಜ್ಯದಲ್ಲಿರುವ ಜೆಡಿಎಸ್ ಒಂದು ಕುಟುಂಬ ರಾಜಕಾರಣದ ಪಕ್ಷ. ಅದರ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ದೇಶದಲ್ಲಿರುವ ಬಹುತೇಕ ಪ್ರಾದೇಶಿಕ ಪಕ್ಷಗಳು ಒಂದು ಕುಟುಂಬಕ್ಕೆ ಸಂಬಂಧಿಸಿದ್ದವುಗಳೇ. ಪ್ರಾದೇಶಿಕ ಪಕ್ಷದ ಕಾರ್ಯಕರ್ತರು ಯೋಚಿಸಬೇಕು, ನಮಗೆ ಯಾವ ಪಾರ್ಟಿ ಉತ್ತಮ ಅಂತಾ. ದೇಶದಲ್ಲೇ ಕುಟುಂಬ ರಾಜಕಾರಣವಿರದ ಪಕ್ಷಯಾವುದಾದರೂ ಇದ್ದರೆ ಅದು ಭಾರತೀಯ ಜನತಾ ಪಾರ್ಟಿ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಮೈತ್ರಿ ಸರ್ಕಾರ ನಿಗದಿಪಡಿಸಿರುವಂತೆ ಅಕ್ಟೋಬರ್ 12 ರಂದು ಸಚಿವ ಸಂಪುಟ ವಿಸ್ತರಣೆ ಆಗುವುದಿಲ್ಲ. ಈ ಬಗ್ಗೆ ನಾನು ಬರೆದು ಕೊಡುತ್ತೇನೆ. ಸಚಿವ ಸಂಪುಟಕ್ಕೆ ಆರು ಜನ ಶಾಸಕರನ್ನು ಸೇರಿಸಿಕೊಳ್ಳಲಿ, ತಕ್ಷಣವೇ ಮೈತ್ರಿ ಸರ್ಕಾರ ಆಂತರಿಕ ಭಿನ್ನಮತದಿಂದ ಬಿದ್ದೋಗುತ್ತದೆ ಎಂದು ಶೆಟ್ಟರ್ ಭವಿಷ್ಯ ನುಡಿದರು…….