ನವದೆಹಲಿ:
ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶದಿಂದಾಗಿ, ರಾಜ್ಯದಾದ್ಯಂತ ಉಂಟಾಗಿರುವ ಹಿಂಸಾಚಾರಕ್ಕೆ ಸಾಂವಿಧಾನಿಕ ಪರಿಣಾಮ ಎದುರಿಸಲು ಸಿದ್ಧರಾಗುವಂತೆ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಗೆ ಬಿಜೆಪಿ ವಾರ್ನ್ ನೀಡಿದೆ.
ರಾಜ್ಯದಾದ್ಯಂತ ಸಂಭವಿಸಿರುವ ಹಿಂಸಾಚಾರ ತಡೆಗಟ್ಟುವಂತೆ ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಹಿಂಸಾಚಾರ ತಡೆಗಟ್ಟುವಲ್ಲಿ ವಿಫಲವಾದರೆ ಸಿಪಿಐ-ಎಂ ಸರ್ಕಾರ ಸಾಂವಿಧಾನಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ಹೇಳಿದ್ದಾರೆ. ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸುಪ್ರಿಂಕೋರ್ಟ್ ಅನುಷ್ಠಾನ ನೆಪದಲ್ಲಿ ಕೇರಳ ಸರ್ಕಾರ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಆರೋಪಿಸಿದರು…..