Breaking News

ಅಶ್ವತ್ಥ ವೃಕ್ಷವನ್ನ ಪೂಜಿಸಿದರೆ ಸಂತಾನ ಭಾಗ್ಯ ಫಲಿಸುತ್ತಾ..!?

SHARE......LIKE......COMMENT......

ಧಾರ್ಮಿಕ ಪರಂಪರೆ:

ಭಾರತೀಯ ಸಂಪ್ರದಾಯದಲ್ಲಿ ವೃಕ್ಷಗಳನ್ನೂ ದೇವರ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ಹಲವು ವೃಕ್ಷಗಳು ವಿಶೇಷ ಮಹತ್ವ ಹೊಂದಿದ್ದು, ಅಧ್ಯಾತ್ಮ, ಉಲ್ಲಾಸದಾಯಕ ಜೀವನ ನಡೆಸಲು ಪೂರಕವಾದ ಸಾಮರ್ಥ್ಯ ಹೊಂದುವಂತೆ ಮಾಡುವ ಚಮತ್ಕಾರಿ ಶಕ್ತಿಗಳನ್ನು ಹೊಂದಿದೆ ಈ ಪೈಕಿ ಅಶ್ವತ್ಥ ವೃಕ್ಷ ಪ್ರಮುಖವಾದದ್ದು..

ಈ ವೃಕ್ಕ್ಕೆ ಅರಳಿ, ಪಿಪ್ಪಲ ಎಂಬ ಹೆಸರುಗಳೂ ಇವೆ. ಪುರಾಣಗಳಲ್ಲಂತೂ ವೃಕ್ಷೋಪಾಸನೆಯ ಬಗ್ಗೆ ಸಾಕಷ್ಟು ಉಲ್ಲೇಖಗಳಿದ್ದು, ರಾಜ-ಮಹಾರಾಜರುಗಳು ವೃಕ್ಷೋಪಾಸನೆ ಮಾಡಿ ಮನೋಭಿಲಾಷೆಗಳನ್ನು ಈಡೇರಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಧಾರ್ಮಿಕ ಆಚರಣೆಯಲ್ಲಿ ವೃಕ್ಷಗಳಿಗೆ ಪೂಜನೀಯ ಸ್ಥಾನ ನೀಡುವ ಮೂಲಕ ಭಾರತೀಯ ಪರಂಪರೆ ಸಸ್ಯ-ವೃಕ್ಷ ಸಂಪತ್ತಿನ ರಕ್ಷಣೆಗೂ ಕಾರಣವಾಗಿದೆ.
ಬಿಲ್ವಪತ್ರೆ ಶಿವನಿಗೆ, ತುಳಸಿ ವಿಷ್ಣುವಿಗೆ, ಗರಿಕೆ ಗಣಪತಿಗೆ ಪ್ರಿಯವಾಗಿರುವಂತೆ ಅಶ್ವತ್ಥ ವೃಕ್ಷ ನವಗ್ರಹಗಳ ಪೈಕಿ ಗುರು ಗ್ರಹಕ್ಕೆ ಸಂಬಂಧಿಸಿದ ವೃಕ್ಷವಾಗಿದೆ. ಈ ನಿಟ್ಟಿನಲ್ಲಿ ಗುರು ಗ್ರಹದ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ಅಶ್ವತ್ಥ ವೃಕ್ಷವನ್ನು ಪೂಜಿಸಬೇಕೆಂಬ ನಂಬಿಕೆ ಇದೆ.

ಅಶ್ವತ್ಥ ವೃಕ್ಷವನ್ನ ಪೂಜಿಸಿದರೆ ಸಂತಾನ ಭಾಗ್ಯ ಫಲಿಸುತ್ತಾ?

ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ಪುತ್ರ ಕಾರಕ ಅಂದರೆ ಸಂತಾನ ಅಥವಾ ಪುತ್ರ ಪ್ರಾಪ್ತಿಗೆ ಸೂಚಕವಾದ ಗ್ರಹವೆಂದು ಹೇಳಲಾಗಿದೆ. ಆದ್ದರಿಂದಲೇ ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅಥವಾ ಸಂತಾನಕ್ಕೆ ಇಚ್ಛಿಸುವವರು ಗುರು ಗ್ರಹಕ್ಕೆ ಪ್ರಿಯವಾಗಿರುವ ಅಶ್ವತ್ಥ ವೃಕ್ಷವನ್ನು ಪೂಜಿಸಬೇಕೆಂದು ಹೇಳಲಾಗುತ್ತದೆ.

ರಾಮಾಯಣದಲ್ಲಿಯೂ ಸಹ ಇದರ ಉಲ್ಲೇಖವಿದ್ದು, ಪುತ್ರಕಾಮೇಷ್ಟಿ ಯಾಗ ಮಾಡಿದ್ದ ದಶರಥ ಮಹಾರಾಜ ಸಹ ತನ್ನ ಪತ್ನಿಯರೊಂದಿಗೆ ಅಶ್ವತ್ಥ ವೃಕ್ಷಕ್ಕೆ ಪೂಜೆ ಸಲ್ಲಿಸಿ ಅನುಗ್ರಹ ಪಡೆದಿದ್ದ ಎಂಬ ಮಾಹಿತಿ ಇದೆ.

ಇನ್ನು ಸರ್ವಕಾಲಕ್ಕೂ ಸಲ್ಲುವ ಭಗವದ್ಗೀತೆಯಲ್ಲಿಯೂ ಅಶ್ವತ್ಥ ವೃಕ್ಷವನ್ನು ಬಣ್ಣಿಸಲಾಗಿದ್ದು, ಸಮಸ್ತ ವೃಕ್ಷಗಳಿಗೆ ಅಶ್ವತ್ಥ ವೃಕ್ಷವನ್ನು ರಾಜನನ್ನಾಗಿ ಪರಿಗಣಿಸಲಾಗಿದೆ. ಅಷ್ಟೇ ಅಲ್ಲದೇ ಉಪನಿಷತ್ ಗಳಲ್ಲೂ ಅಶ್ವತ್ಥ ವೃಕ್ಷದ ಬಗ್ಗೆ ಉಲ್ಲೇಖಗಳಿದ್ದು, ಕಠೋಪನಿಷತ್ತಿನಲ್ಲಿ ಸಂಸಾರವನ್ನು ಅಶ್ವತ್ಥವೃಕ್ಷಕ್ಕೆ ಹೋಲಿಸಲಾಗಿದೆ.

ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೂಪಿಣೇ  ಅಗ್ರತಶ್ಯಿವರೂಪಾಯ ವೃಕ್ಷ ರಾಜಾಯತೇ ನಮಃ ಎಂಬ ಶ್ಲೋಕದ ಅರ್ಥದಂತೆ, ಜಗತ್ತಿನ ಸೃಷ್ಟಿ, ಸ್ಥಿತಿ, ಲಯದ ನಿಯಾಮಕರಾದ ಬ್ರಹ್ಮ ವಿಷ್ಣು ಮಹೇಶ್ವರರು ವೃಕ್ಷರಾಜ ಅಶ್ವತ್ಥ ವೃಕ್ಷದಲ್ಲಿ ನೆಲಿಸಿದ್ದು, ದೈವದ ಸಾನ್ನಿಧ್ಯ ಇರುವುದರಿಂದ ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕುವುದರಿಂದ ಮನೋಭಿಲಾಶೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ……..