Breaking News

ಕ್ಯಾನ್ಸರ್​ ಸೇರಿ 50 ವಿರಳ ಕಾಯಿಲೆಗಳ ಔಷಧಿ ಶೇ25-30ರಷ್ಟು ಕಡಿಮೆ..!

ಹೊಸ ಆದೇಶದಿಂದ ಜನರಿಗೆ ಸಾಕಷ್ಟು ಅನುಕೂಲ

SHARE......LIKE......COMMENT......

ನವದೆಹಲಿ:

ಪ್ರಧಾನಮಂತ್ರಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈವರೆಗೆ ಬೆಲೆ ನಿಯಂತ್ರಣದ ವ್ಯಾಪ್ತಿಗೆ ಒಳಪಡದ ಕ್ಯಾನ್ಸರ್​ ಸೇರಿದಂತೆ 50 ವಿರಳ ಕಾಯಿಲೆಗಳ ಔಷಧಗಳ ಬೆಲೆಯನ್ನು ಶೇ25-30ರಷ್ಟು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಬೆಲೆ ನಿಯಂತ್ರಣದಿಂದ ಹೊರಗಿರುವ ಕ್ಯಾನ್ಸರ್​ ಸೇರಿ ಅತಿ ವಿರಳ ಕಾಯಿಲೆಗಳ ಔಷಧಿಗಳನ್ನು ಪಟ್ಟಿ ಮಾಡಿ, ಜನರ ಕೈಗೆಟುಕುವ ಬೆಲೆಗೆ ನೀಡುವ ಬಗ್ಗೆ ಆರೋಗ್ಯ ಇಲಾಖೆಗೆ ಪ್ರಧಾನಿ ಸೂಚಿಸಿದ್ದಾರೆ. ಈಗಾಗಲೇ ಔಷಧಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿ ಆದೇಶ ಹೊರಬೀಳಲಿದೆ. ಹೊಸ ಆದೇಶದಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ……