ಗದಗ :
ಗದಗನ ತೋಂಟದಾರ್ಯ ಮಠಕ್ಕೆ ನೂತನ ಪೀಠಾಧ್ಯಕ್ಷರಾಗಿ ಸಿದ್ದರಾಮಶ್ರೀಗಳು ಪೀಠಾರೋಹಣ ಮಾಡಿದ್ರು. ಡಾ.ತೋಂಟದ ಸಿದ್ಧಲಿಂಗ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಇಂದು 20ನೇ ಪೀಠಾಧಿಪತಿಯಾಗಿ ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಶ್ರೀಗಳು ಪೀಠಾಧಿಕಾರ ವಹಿಸಿಕೊಂಡರು.
ಮೂರು ಸಾವಿರ ಮಠದ ಸ್ವಾಮೀಜಿಗಳು ಪೀಠಾರೋಹಣ ನೆರವೇರಿಸಿದ್ರು. ಸಾವಿರಾರು ಭಕ್ತರು ಬಸವಣ್ಣನವರ ವಚನಗಳನ್ನು ಪಠಣ ಮಾಡುವ ಮೂಲಕ ಶ್ರೀಗಳ ಪಿಠಾರೋಹಣ ಕಾರ್ಯಕ್ರಮಕ್ಕೆ ಮೆರಗು ಹೆಚ್ಚಿಸಿದ್ರು. ಪುಷ್ಪ ಹಾಕುವ ಮೂಲಕ ಶ್ರೀಗಳು ನಮನ ಸಲ್ಲಿಸಿದ್ರು.ಈ ಸಂದರ್ಭದಲ್ಲಿ ಮಾತನಾಡಿದ ನೂತನ ಸ್ವಾಮೀಜಿಗಳು ಲಿಂಗೈಕ್ಯ ಶ್ರೀಗಳಾದ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳನ್ನು ಸ್ಮರಿಸಿದ್ರು……..