ಕ್ರಿಸ್ಪಿ ಚಿಕನ್ ಮಂಚೂರಿಗೆ ಬೇಕಾಗಿರುವ ಸಾಮಾಗ್ರಿಗಳು:
*ಮೂಳೆ ರಹಿತ ಚಿಕನ್ – 1/2 ಕೆ.ಜಿ
*ಸಂಸ್ಕರಿತ ಗೋಧಿ ಹಿಟ್ಟು – 1/2 ಟೀ ಚಮಚ
*ಸೋಯಾ ಸಾಸ್ – 1/2 ಟೀ ಚಮಚ
*ಹಸಿ ಮೆಣಸಿನ ಕಾಯಿ ಸಾಸ್ – 1/2 ಟೀ ಚಮಚ
*ಟೊಮ್ಯಾಟೋ ಕೆಚಪ್ – 1/2 ಟೇಬಲ್ ಚಮಚ
*ಚೆನ್ನಾಗಿ ಕತ್ತರಿಸಿಕೊಂಡಿರುವ ಈರುಳ್ಳಿ – 2
*ಕತ್ತರಿಸಿರುವ ಬೆಳ್ಳುಳ್ಳಿ – 10 ಸೊಳೆಗಳು
*ಕತ್ತರಿಸಿದ ಹಸಿ ಮೆಣಸಿನಕಾಯಿ – 1
*ಕರಿ ಮೆಣಸಿನ ಹುಡಿ – 1/4 ಟೀ ಚಮಚ
*ಎಣ್ಣೆ – 1/4 ಲೀಟರ್
*ರುಚಿಗೆ ಬೇಕಾಗಿರುವಷ್ಟು ಉಪ್ಪು
ಕ್ರಿಸ್ಪಿ ಚಿಕನ್ ತಯಾರಿಸುವ ಸುಲಭ ವಿಧಾನ:
*ಚಿಕನ್ ತುಂಡುಗಳನ್ನು ಸಂಸ್ಕರಿತ ಗೋಧಿ ಹಿಟ್ಟು ಮತ್ತು ಉಪ್ಪು ಮಿಶ್ರಣದಲ್ಲಿ ಅದ್ದಿಟ್ಟು ಬಳಿಕ ಚೆನ್ನಾಗಿ ಫ್ರೈ ಮಾಡಿ.
*ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿಮಾಡಿಕೊಂಡು ಅದಕ್ಕೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಎಲ್ಲಾ ಸಾಸ್‌ಗಳನ್ನು ಹಾಗೂ ಕಾಳು ಮೆಣಸಿನ ಪುಡಿ, ಸ್ವಲ್ಪ ಉಪ್ಪು ಮತ್ತೆ ಕಡೆಯದಾಗಿ ಫ್ರೈ ಮಾಡಿದ ತುಂಡುಗಳನ್ನು ಹಾಕಿ.
*ಇದೀಗ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಕ್ರಿಸ್ಪಿ ಚಿಕನ್ ಮಂಚೂರಿ ರೆಡಿ….