ಬೆಂಗಳೂರು:
ಜನಾರ್ದನ ರೆಡ್ಡಿ ಆಂಬಿಡೆಂಟ್ ಕಂಪನಿಯ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಭವಿಷ್ಯ ಇಂದು ನಿರ್ಧಾರವಾಗಲಿದೆ. ನಿನ್ನೆ ರೆಡ್ಡಿ ಜಾಮಿನು ಅರ್ಜಿ ವಿಚಾರಣೆ ನಡೆಸಿದ 1ನೇ ACMM ಕೋರ್ಟ್, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಹೀಗಾಗಿ ಪರಪ್ಪನ ಆಗ್ರಹಾರದಲ್ಲಿರುವ ರೆಡ್ಡಿಗೆ ಮತ್ತೆ ಜೈಲೇ ಗತಿಯಾ..? ಅಥವಾ ಬೇಲ್ ಸಿಗುತ್ತಾ ಅನ್ನೋದು ಪ್ರಶ್ನೆ……
ಈ ಮಧ್ಯೆ ಜನಾರ್ದನರೆಡ್ಡಿ ಬೆಳ್ಳಗ್ಗೆಯೇ ಎದ್ದು ತುಳಸಿ ಕಟ್ಟೆಗೆ ಪೂಜೆ ಸಲ್ಲಿಸಿದ್ದಾರೆ. ಅವಲಕ್ಕಿ ಚಿತ್ರನ್ನ ಬೇಡ ಎಂದು ತಿರಸ್ಕರಿಸಿರುವ ಜನಾರ್ಧನ ರೆಡ್ಡಿ, ಪಾರಿಜಾತ ನಿವಾಸದಿಂದ ಟಿಫನ್ ಬರುತ್ತೆ ಎಂದು ಹೇಳಿದ್ದಾರೆ.ಮನೆಯಿಂದ ತಮ್ಮ ಸಿಬ್ಬಂದಿ ರಾಜು ಎಂಬುವನ ಮೂಲಕ ಇಡ್ಲಿ-ವಡೆ ತರಿಸಿಕೊಂಡಿದ್ದಾರೆ. ಪ್ರತಿ ದಿನ ಮನೆಯಿಂದಲೇ ಊಟ ಮತ್ತು ಟಿಫನ್ ತರಿಸಿಕೊಂಡು ರೆಡ್ಡಿ ಸೇವನೆ ಮಾಡ್ತಿದ್ದಾರೆ…………