ಜಪಾನ್:
ಜಪಾನ್ನಲ್ಲಿ ಹೈಸ್ಪೀಡ್ ಹಡಗಿಗೆ ತಿಮಿಂಗಿಲ ಡಿಕ್ಕಿ ಹೊಡೆದಿದೆ. ಪರಿಣಾಮ ಹಡಗಿನಲ್ಲಿದ್ದ 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜಪಾನ್ನ ನಿಗಾಟಾ ದಿಂದ ಸಾಡೋ ದ್ವೀಪಕ್ಕೆ ಹೋಗುತ್ತಿದ್ದ ಈ ಹೈಸ್ಪೀಡ್ ಹಡಗಿಗೆ ಭಾರೀ ಗಾತ್ರದ ತಿಮಿಂಗಿಲ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ತಕ್ಷಣ ಹಡಗನ್ನು ಸಮೀಪದ ಬಂದರಿನಲ್ಲಿ ನಿಲ್ಲಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ತಜ್ಞರು ಹಡಗಿನ ತಾಂತ್ರಿಕ ದೋಷಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಬಂದರು ಸಮೀಪದಲ್ಲೇ ಈ ಘಟನೆ ಸಂಭವಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ…..