ಬೆಂಗಳೂರು:
ಸ್ಯಾಂಡಲ್ವುಡ್ ನಟ ರವಿ ಪ್ರಕಾಶ್ ಲೈಂಗಿಕ ಕಿರುಕುಳ ನೀಡ್ತಿದ್ದಾರೆ ಅಂತಾ ನಟಿ ವಿಜಯಲಕ್ಷ್ಮಿ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ನಟಿ ವಿಜಯಲಕ್ಷ್ಮಿ, ಹಣಕಾಸಿನ ತೊಂದರೆಯಲ್ಲಿ ಸಿಲುಕಿದ್ರು. ಇದನ್ನೇ ಎನ್ಕ್ಯಾಶ್ ಮಾಡಿಕೊಂಡ ರವಿ ಪ್ರಕಾಶ್ 1 ಲಕ್ಷ ನೆರವು ನೀಡಿ ತಮಗೆ ಲೈಂಗಿಕ ಕಿರುಕುಳ ನೀಡ್ತಿದ್ದಾರೆ ಅಂತಾ ವಿಜಯಲಕ್ಷ್ಮಿ ಆರೋಪಿಸಿದ್ದಾರೆ.
ಇನ್ನು ಈ ಕುರಿತು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ. ವಿಡಿಯೋ ಮಾಡಿ ತಮ್ಮ ಅಳಳು ತೋಡಿಕೊಂಡಿರೋ ವಿಜಯಲಕ್ಷ್ಮಿ, ಆರೋಗ್ಯ ವಿಚಾರಿಸೋ ನೆಪದಲ್ಲಿ ಬಂದು ರವಿ ಪ್ರಕಾಶ್ ಕಿರುಕುಳ ಕೊಡ್ತಿದ್ದಾರೆ ಅಂತಾ ಆರೋಪ ಮಾಡಿದ್ದಾರೆ. ಅಲ್ದೇ ಪದೇ ಪದೇ ಫೋನ್ ಮಾಡಿ ಕೂಡಾ ಲೈಂಗಿಕ ಕಿರುಕುಳ ನೀಡ್ತಿದ್ದಾರೆ ಅಂತಾ ಹೇಳಿಕೊಂಡಿದ್ದಾರೆ……