ಹೊಸದಿಲ್ಲಿ:
ಉಚಿತ 4ಜಿ ಸೇವೆ ನೀಡುವ ಮೂಲಕ ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿರುವ ರಿಲಯನ್ಸ್ ಜಿಯೋ, ತದಾ ಬಳಿಕ ನಿರಂತರ ಅಂತರಾಳದಲ್ಲಿ ಹಲವು ಆಕರ್ಷಕ ಆಫರ್‌ಗಳನ್ನು ಘೋಷಿಸುವ ಮೂಲಕ ಬಳಕೆದಾರರನ್ನು ಮೋಡಿ ಮಾಡುತ್ತಲೇ ಬಂದಿದೆ.
ಇದೀಗ ದೇಶದ ಅತ್ಯಂತ ಜನಪ್ರಿಯ 4ಜಿ ಸೇವೆ ನೀಡುತ್ತಿರುವ ಜಿಯೋ, ಮಗದೊಂದು ಬೊಂಬಾಟ್ ಆಫರ್‌ನೊಂದಿಗೆ ಮುಂದೆ ಬಂದಿದೆ. ದೀಪಾವಳಿ ಹಬ್ಬದ ಋತುವಿನಲ್ಲಿ ಮೋಡಿ ಮಾಡಿರುವ ಜಿಯೋ ಶೇಕಡಾ 100ರಷ್ಟು ಕ್ಯಾಶ್‌ಬ್ಯಾಕ್ ಆಫರ್ ಘೋಷಿಸಿದೆ. ಜಿಯೋದ ಬಹುತೇಕ ಎಲ್ಲ ಜನಪ್ರಿಯ ಪ್ಲ್ಯಾನ್‌ಗಳಿಗೆ ಇದು ಅನ್ವಯವಾಗಲಿದೆ ಎಂಬುದು ಗಮನಾರ್ಹವೆನಿಸುತ್ತದೆ.
ರಿಲಯನ್ಸ್ ಡಿಜಿಟಲ್ ಕೂಪನ್ಸ್ ರೂಪದಲ್ಲಿ ಪ್ರೈಮ್ ಮೆಂಬರ್‌ಗಳಿಗೆ ಶೇಕಡಾ 100ರಷ್ಟು ಕ್ಯಾಶ್ ಬ್ಯಾಕ್ ಲಭ್ಯವಾಗಲಿದೆ. 799 ರೂ.ಗಿಂತಲೂ ಮೇಲ್ಪಟ್ಟ ರಿಚಾರ್ಜ್‌ಗಳಿಗೆ ಎರಡಕ್ಕಿಂತಲೂ ಹೆಚ್ಚು ಕ್ಯಾಶ್‌ಬ್ಯಾಕ್ ಕೂಪನ್‌ಗಳು ಲಭ್ಯವಾಗಲಿದೆ. ಆದರೆ ಒಂದೇ ಸಮಯಕ್ಕೆ ಎರಡು ಕೂಪನ್ ಬಳಕೆ ಮಾಡುವಂತಿಲ್ಲ.
ಇದರ ಹೊರತಾಗಿ ವಾರ್ಷಿಕ 1699 ರೂ.ಗಳ 4ಜಿ ಪ್ಲ್ಯಾನ್ ಸಹ ಘೋಷಿಸಿದ್ದು, ಇದರಂತೆ ಮುಂದಿನ ದೀಪಾವಳಿ ವರೆಗೂ ಅನಿಯಮಿತ (547 ಜಿಬಿ) ಡೇಟಾ ಪಡೆಯಬಹುದಾಗಿದೆ. ಅಂದರೆ ದೈನಿಕ 1.5 ಜಿಬಿ ಡೇಟಾ ಸೌಲಭ್ಯ ಸಿಗಲಿದೆ. ಉಚಿತ ವಾಯ್ಸ್ ಸೇವೆಯೂ ಲಭ್ಯವಾಗಲಿದೆ. ಇದರ ಹೊರತಾಗಿ 4,999 ರೂ. ಹಾಗೂ 9999 ರೂ.ಗಳ ವಾರ್ಷಿಕ ಪ್ಲ್ಯಾನ್ ಸಹ ಪ್ರಕಟಿಸಲಾಗಿದೆ……