ರಾಜಕೀಯ:
ಇಂದು ಮಧ್ಯಾಹ್ನ 3 ಗಂಟೆಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ರ ಬೇಲ್ ಅರ್ಜಿ ವಿಚಾರಣೆಗೆ ಬರಲಿದೆ. ದೆಹಲಿಯ ಇಡಿ ವಿಶೇಷ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದ್ದು, ಇಡಿ ಪರ ವಕೀಲ ಕೆ.ಎಂ.ನಟರಾಜ್ ವಾದ ಮಂಡನೆ ಮಾಡಲಿದ್ದಾರೆ. ಎದೆನೋವು, ಹೈಬಿಪಿ, ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರೋ ಡಿಕೆಶಿಗೆ ದೆಹಲಿಯ ಆರ್ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, RML ಆಸ್ಪತ್ರೆಯ ವೈದ್ಯಕೀಯ ಮಾಹಿತಿಯನ್ನ ಡಿಕೆಶಿ ಪರ ವಕೀಲರು ಕೋರ್ಟ್ಗೆ ನೀಡಲಿದ್ದಾರೆ. ಹೀಗಾಗಿ ಅನಾರೋಗ್ಯ ಹಿನ್ನೆಲೆ ಡಿಕೆಶಿಗೆ ED ಕೋರ್ಟ್ ಜಾಮೀನು ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ……