Breaking News

ಹಾಟ್ ಸ್ಪೈಸಿ ತವಾ ಪಲಾವ್…!

ತವಾ ಪಲಾವ್

SHARE......LIKE......COMMENT......
   ಹಾಟ್ ಸ್ಪೈಸಿ ತವಾ ಪಲಾವ್ ಗೆ ಬೇಕಾಗುವ ಪದಾರ್ಥಗಳು
  • ಬಾಸುಮತಿ ಅಕ್ಕಿ- 1 ಬಟ್ಟಲು
  • ನೀರು – 6 ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- 1 ಚಮಚ
  • ಅರಿಶಿಣದ ಪುಡಿ- ಅರ್ಧ ಚಮಚ
  • ಬೆಣ್ಣೆ- 2 ಚಮಚ
  • ಜೀರಿಗೆ- 1 ಚಮಚ
  • ಈರುಳ್ಳಿ – ಹೆಚ್ಚಿಕೊಂಡಿದ್ದು 1-2
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
  • ಕ್ಯಾರೆಟ್ – ಹೆಚ್ಚಿಕೊಂಡಿದ್ದು 1 ಚಿಕ್ಕ ಬಟ್ಟಲು
  • ಬೀನ್ಸ್- ಹೆಚ್ಚಿಕೊಂಡಿದ್ದು 1 ಚಿಕ್ಕ ಬಟ್ಟಲು
  • ಬಟಾಣಿ – 2-4 ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಟೊಮೆಟೋ- ಹೆಚ್ಚಿಕೊಂಡಿದ್ದು 2
  • ಪಾವ್ ಬಾಜಿ ಮಸಾಲೆ ಪುಡಿ- ಅರ್ಧ ಚಮಚ
  • ಅಚ್ಚ ಖಾರದ ಪುಡಿ- ಅರ್ಧ ಚಮಚ
  • ಆಲೂಗಡ್ಡೆ- ಬೇಯಿಸಿ ಕತ್ತರಿಸಿಕೊಂಡಿದ್ದು 2
  • ಕೊತ್ತಂಬರಿ ಸೊಪ್ಪು- ಸಣ್ಣಗೆ ಕತ್ತರಿಸಿಕೊಂಡಿದ್ದು ಸ್ವಲ್ಪ
  • ನಿಂಬೆ ರಸ – ಸ್ವಲ್ಪ
ಹಾಟ್ ಸ್ಪೈಸಿ ತವಾ ಪಲಾವ್  ಮಾಡುವ  ಸುಲಭ ವಿಧಾನ…
Advertisement
  • ಮೊದಲಿಗೆ ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು 20 ನಿಮಿಷ ನೆನೆಸಿಕೊಳ್ಳಬೇಕು.
  • ಪಾತ್ರೆಯೊಂದನ್ನು ಒಲೆಯ ಮೇಲಿಟ್ಟು ಅದಕ್ಕೆ 6 ಬಟ್ಟಲು ನೀರು, ಉಪ್ಪು, ಅರಿಶಿನ, ಎಣ್ಣೆ ಹಾಕಿ ಕುದಿಯಲು ಬಿಡಬೇಕು. ನೀರು ಕುದಿಯುತ್ತಿರುವ ಸಂದರ್ಭದಲ್ಲಿ ನೆನೆಸಿದ ಬಾಸುಮತಿ ಅಕ್ಕಿಯನ್ನು ಹಾಕಿ 13 ನಿಮಿಷ ಬೇಯಿಸಿಕೊಳ್ಳಬೇಕು. ಅಕ್ಕಿ ಬಂದ ಬಳಿಕ ನೀರನ್ನು ಬಸಿದು, ಅದಕ್ಕೆ ತಣ್ಣಗಿನ ನೀರು ಹಾಕಿ ಬಸಿದಿಟ್ಟುಕೊಳ್ಳಬೇಕು.
  • ಬಾಣಲೆಗೆ ಬೆಣ್ಣೆ ಹಾಕಿ ಕರಗಿದ ಬಳಿಕ ಜೀರಿಗೆ, ಈರುಳ್ಳು ಹಾಗೂ ಶುಂಠಿ, ಬೆಳ್ಳುಳ್ಳು ಪೇಸ್ಟ್ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಕ್ಯಾರೆಟ್, ಬೀನ್ಸ್, ಬಟಾಣಿ, ಉಪ್ಪು ಹಾಕಿ ಕಂಪಗೆ ಹುರಿದುಕೊಳ್ಳಬೇಕು. ನಂತರ ಟೊಮೆಟೋ ಹಾಕಿ ಬೇಯಲು ಬಿಡಬೇಕು.
  • ಬಳಿಕ ಪಾವ್ ಬಾಜಿ ಮಸಾಲೆ ಪುಡಿ, ಅಚ್ಚ ಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಕತ್ತರಿಸಿಕೊಂಡ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು, ಈಗಾಗಲೇ ಮಾಡಿಕೊಂಡ ಅನ್ನ, ಮತ್ತೆ ಅರ್ಧ ಚಮಚ ಪಾವ್ ಬಾಜಿ ಮಸಾಲೆ ಪುಡಿ ಅರ್ಧ ಚಮಚ ಹಾಗೂ ಮತ್ತೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು, ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ರಸ ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ತವಾ ಪಲಾವ್ ಸವಿಯಲು ಸಿದ್ಧ……