Breaking News

ಪ್ರತಿದಿನ ತುಳಸಿ ಟೀ ಕುಡಿಯಲೇ ಬೇಕು..!

SHARE......LIKE......COMMENT......

ಹೆಲ್ತ್‌ ಟಿಪ್ಸ್:

ತುಳಸಿ ಹಲವು ಆಯುರ್ವೇದ ಔಷಧಗಳಲ್ಲೂ ಸ್ಥಾನ ಪಡೆದಿದೆ. ಮೊದಲೆಲ್ಲಾ ಮನೆಯ ಮುಂಭಾಗದಲ್ಲಿ ತುಳಸಿ ಗಿಡ ಇರುತ್ತಿತ್ತು, ಸಣ್ಣಪುಟ್ಟ ಕಾಯಿಲೆಗಳಿಗೆ ತುಳಸಿ ಕಷಾಯ ಮಾಡಿ ಕುಡಿಯುತ್ತಿದ್ದರು. ಆದರೆ ಇತ್ತೀಚೆಗೆ ತುಳಸಿ ಕಷಾಯ ಕುಡಿಯುವವರ ಪ್ರಮಾಣ ತೀರಾ ಕಡಿಮೆ ಇದೆ. ಆದರೆ, ನಾವು ದಿನನಿತ್ಯ ಕುಡಿಯುವ ಟೀ ಬದಲು ತುಳಸಿಯ ಟೀ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದರಿಂದ ಹಲವು ಲಾಭ ಪಡೆಯಬಹುದು.

ತುಳಸಿಯನ್ನು ಹಸಿಯಾಗಿ, ಒಣಗಿಸಿ ಅಥವಾ ಪುಡಿಯ ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ. ಇದರಲ್ಲಿ ನೈಸರ್ಗಿಕ ಆ್ಯಂಟಿ ಆಕ್ಸಿಡೆಂಟ್​ಗಳ ಪ್ರಮಾಣ ಹೆಚ್ಚಿರುವುದರಿಂದ ನಮ್ಮ ದೇಹ ಹಲವಾರು ರೋಗಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ. ನಾವು ಹಸಿಯಾದ ಅಥವಾ ಒಣಗಿದ ತುಳಸಿ ಎಲೆಗಳಿಂದ ಟೀ ಸಿದ್ಧಪಡಿಸಿ ದಿನವೂ ಸೇವಿಸುವುದರಿಂದ ಮುಖ್ಯವಾಗಿ ಈ ಐದು ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಾಧ್ಯವಿದೆ.

1.ಆರ್ಥರೈಟಿಸ್​ ರೋಗ ನಿಯಂತ್ರಿಸುತ್ತದೆ

ತುಳಸಿಯಲ್ಲಿರುವ ಎಜಿನಾಲ್​ ಎಂಬ ರಾಸಾಯನಿಕ ಗಂಟುಗಳಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.

2.ಹಲ್ಲಿನ ಮತ್ತು ಬಾಯಿಯ ಆರೋಗ್ಯ ಕಾಪಾಡುತ್ತದೆ

ತುಳಸಿಯಲ್ಲಿರುವ ಔಷಧೀಯ ಗುಣಗಳು ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳ ವಿರುದ್ಧ ಹೋರಾಡುತ್ತದೆ. ಇದು ಮೌಥ್​ ಫ್ರೆಷನರ್​ನಂತೆ ಕೆಲಸ ಮಾಡುತ್ತದೆ.

3. ಸಕ್ಕರೆ ಪ್ರಮಾಣ ನಿಯಂತ್ರಿಸುತ್ತದೆ

ಹಾಲು ಹಾಕಿದ ಟೀ ಕುಡಿಯುವ ಬದಲು ತುಳಸಿ ಟೀ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ದಿನನಿತ್ಯ ತುಳಸಿ ಟೀ ಕುಡಿಯುವುದರಿಂದ ದೇಹದಲ್ಲಿ ಕೊಬ್ಬಿನಂಶ ಕಡಿಮೆಯಾಗುತ್ತದೆ. ಇದರಿಂದ ಸಕ್ಕರೆ ಅಂಶ ಶಕ್ತಿಯಾಗಿ ಪರಿವರ್ತನೆ ಹೊಂದಲು ಸಹಕಾರಿಯಾಗುತ್ತದೆ.

4.ಸ್ಟ್ರೆಸ್​ ಕಡಿಮೆ ಮಾಡುತ್ತದೆ

ನಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಂದಾಗಿ. ನಮ್ಮ ಮಿದುಳಿನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಸ್ಟ್ರೆಸ್​ ಇದ್ದೇ ಇರುತ್ತದೆ. ಇದನ್ನು ಕಡಿಮೆ ಮಾಡುವಲ್ಲಿ ತುಳಸಿ ಟೀ ಉಪಯುಕ್ತವಾಗಿದ್ದು, ಸ್ಟ್ರೆಸ್​ ಹಾರ್ಮೋನ್​ ಎಂದೇ ಗುರುತಿಸಲ್ಪಟ್ಟಿರುವ ಕೋರ್ಟಿಸೋಲ್​ ಪ್ರಮಾಣವನ್ನು ನಿಂತ್ರಣದಲ್ಲಿಡುತ್ತದೆ. ಇದರಿಂದ ನಮ್ಮ ದೇಹ, ಮನಸ್ಸು ಸ್ಟ್ರೆಸ್​ನಿಂದ ಮುಕ್ತವಾಗುತ್ತದೆ.

5. ಉಸಿರಾಟದ ತೊಂದರೆ

ತುಳಸಿ ಟೀ ನೆಗಡಿ, ಕೆಮ್ಮು, ಅಸ್ತಮಾ ಸೇರಿದಂತೆ ಹಲವು ಉಸಿರಾಟದ ತೊಂದರೆಗಳನ್ನು ಗುಣಪಡಿಸುತ್ತದೆ. ಮುಖ್ಯವಾಗಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಕೆಮ್ಮನ್ನು ನಿಯಂತ್ರಿಸುತ್ತದೆ, ಕಫದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.