ಮೈಸೂರು:
ದಸರಾ ಆನೆ ದ್ರೋಣ ಸಾವಿನ ಸುತ್ತ ಅನುಮಾನದ ಹುತ್ತ ಸುತ್ತಿಕೊಂಡಿದೆ. ದ್ರೋಣ ಸಾವಿನ ಹಿಂದೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣನಾ ಅನ್ನೋ ಪ್ರಶ್ನೆಗಳು ಹುಟ್ಟಿಕೊಳ್ತಿವೆ. ಸಾಯುವ ಮುನ್ನ ಬಹಳ ಹೊತ್ತು ದ್ರೋಣ ಆನೆ ನರಳಾಡಿತ್ತು. ದ್ರೋಣನಿಗೆ ಮದ ಬಂದಿತ್ತು. ಮದವೇರಿದ್ದ ಆನೆ ಕಟ್ಟಿ ಅಧಿಕಾರಿಗಳು ತಪ್ಪು ಮಾಡಿದ್ರು. ಕಳೆದ ಬಾರಿ ಮದವೇರಿದ್ದ ದ್ರೋಣ ಕಾಡಿಗೆ ಪರಾರಿಯಾಗಿದ್ದ. ಈ ಬಾರಿಯೂ ತಪ್ಪಿಸಿಕೊಂಡು ಹೋಗಬಹುದೆಂದು ಕಾಲಿಗೆ ಸರಪಳಿ ಕಟ್ಟಿದ್ರು. ದ್ರೋಣನಿಗೆ ಆಹಾರ, ನೀರು ನೀಡಿರಲಿಲ್ಲ ಅಂತಾ ಪರಿಸರವಾದಿಗಳು ಆರೋಪಿಸುತ್ತಿದ್ದಾರೆ. ಆದ್ರೆ ಅರಣ್ಯಾಧಿಕಾರಿಗಳು ಮಾತ್ರ ಆರೋಪ ನಿರಾಕರಿಸಿದ್ದಾರೆ…….