ಮುಗ್ಗರಿಸಿ ಬಿದ್ದ ಸಚಿವ ಜಿ.ಟಿ ದೇವೇಗೌಡ..!
ದಸರಾ ಮ್ಯಾರಥಾನ್ ವೇಳೆ ಘಟನೆ..
ಮೈಸೂರು:
ದಸರಾ ಸಂಭ್ರಮದ ವೇಳೆ ಆಯೋಜಿಸಲಾಗಿದ್ದ ಮ್ಯಾರಥಾನ್ ಓಟದ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ನಡುರಸ್ತೆಯಲ್ಲೇ ಮುಗ್ಗರಿಸಿ ಬಿದ್ದ ಘಟನೆ ನಡೆದಿದೆ.ಭಾನುವಾರ ಓವಲ್ ಮೈದಾನದಲ್ಲಿ ಕ್ರೀಡಾ ಇಲಾಖೆ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಉತ್ಸಾಹದಿಂದ ಪಾಲ್ಗೊಂಡ ಸಚಿವ ಜಿಟಿಡಿ ಪಂಚೆ ಎತ್ತಿಕಟ್ಟಿ ಓಡಲು ಆರಂಭಿಸಿದರು.ಪಂಚೆ ಕಾಲಿಗೆ ಅಡ್ಡಬಂದಂತಾಗಿ ಬಿದ್ದಿದ್ದಾರೆ, ಕೂಡಲೆ ಪಕ್ಕದಲ್ಲಿದ್ದ ಕ್ಯಾಮರಾಮೆನ್‌ಗಳು, ಮ್ಯಾರಥಾನ್ ಸ್ಫರ್ಧಿಗಳು ಸಚಿವರ ನೆರವಿಗೆ ಬಂದು ಮೇಲಕ್ಕೆತ್ತಿದರು…..