ತುಮಕೂರು:
ಲಕ್ಷಾಂತರ ಬಡ ಮಕ್ಕಳ ಬದುಕು ರೂಪಿಸಿದ ಸಿದ್ಧಗಂಗೆಯ ಮಹಾಯೋಗಿ ಡಾ. ಶಿವಕುಮಾರ ಸ್ವಾಮೀಜಿ (111) ಕಾಯಕ ಬದುಕಿಗೆ ಭೌತಿಕ ವಿದಾಯ ಹೇಳಿದ್ದಾರೆ. ಇದರೊಂದಿಗೆ, ಸಿದ್ಧಗಂಗಾ ಮಠದಿಂದ ಜಗತ್ತಿಗೇ ಹೊಸಬೆಳಕು ನೀಡಿದ, ಇಪ್ಪತ್ತು ಮತ್ತು ಇಪ್ಪತ್ತೊಂದನೇ ಶತಮಾನದ ಸಾಕ್ಷಿಪ್ರಜ್ಞೆಯಂತಿದ್ದ ಮಹಾಚೇತನವೊಂದು ಭಗವಂತನೆಡೆಗೆ ತೆರಳಿದಂತಾಗಿದೆ.
ಸಿದ್ಧಗಂಗಾ ಶ್ರೀಗಳ ಗೌರವಾರ್ಥ ರಾಜ್ಯ ಸರ್ಕಾರ ಮೂರು ದಿನ ಶೋಕಾಚರಣೆ, ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲು ಆದೇಶಿಸಲಾಗಿದೆ……