ಬೆಂಗಳೂರು:
ಎಲ್ಲಾ ಕಡೆ ಬಿಜೆಪಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಬರುತ್ತೆ. ಆದ್ರೆ ದೇವರ ಇಚ್ಛೆ ಇಲ್ಲದ ಕಾರಣ ಅಧಿಕಾರ ಸಿಕ್ಕಿಲ್ಲ. ಪ್ರಜಾಪ್ರಭುತ್ವದಲ್ಲಿ 49 ಅಂದ್ರೆ 0 ಸಮ, 51 ಬಂದ್ರೆ ನೂರಕ್ಕೆ ಸಮ. ಆಧಿಕಾರ ಸಿಗದೇ ಇರೋದು ನಮ್ಮ ವೈಫಲ್ಯ ಅಲ್ಲ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ನಡೆದ ವಿಶ್ವಕರ್ಮ ಯಜ್ಞ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಸೋತರೂ, ಪಕ್ಷದ ಮುಂದಾಳತ್ವ ವಹಿಸಿಕೊಂಡಿದ್ದ ಆರ್.ಅಶೋಕ್ರನ್ನ ಸಮರ್ಥಿಸಿಕೊಂಡರು. ಅಶೋಕ್ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದ್ರೆ, ಕೊನೇ ಗಳಿಗೆಯಲ್ಲಿ ನಿರ್ಮಲಾ ಸೀತಾರಾಮನ್ ಮತ್ತು ಅನಂತ್ ಕುಮಾರ್ ಅನಿವಾರ್ಯ ಕಾರಣಗಳಿಂದ ಬರೋಕೆ ಆಗಲಿಲ್ಲ. ಅದು ನಮ್ಮ ಸೋಲಿಗೆ ಕಾರಣವಾಯಿತು. ವಿನಾಕಾರಣ ಅಶೋಕ್ ಮೇಲೆ ಕಲ್ಲು ಎಸೆಯೋದು ಸರಿಯಲ್ಲ ಅಂತಾ ಹೇಳಿದರು.
ಯಡಿಯೂರಪ್ಪ ಆಸೆ ಈಡೇರಲಿ ಮತ್ತೊಮ್ಮೆ ನಾಡನ್ನು ಆಳಲಿ..ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜಗುರು ದ್ವಾರಕನಾಥ್ ಗುರೂಜಿ, ನನಗೆ ಯಾರ ಮೇಲೂ ಕೋಪ ಇಲ್ಲ. ನಾನು ಯಾರನ್ನೂ ಮಾಜಿ ಅಂತ ಕರೆಯಲ್ಲ. ದೇವರು ಏನ್ ಕೊಡಬೇಕೊ ಕೊಡ್ತಾನೆ. ಯಡಿಯೂರಪ್ಪರು ಮತ್ತೆ ಮುಖ್ಯಮಂತ್ರಿ ಆಗಲಿ ಅಂತ ಶುಭ ಹಾರೈಸಿದರು…….