Breaking News

ಕುಟುಂಬ ರಾಜಕಾರಣದ ಜೆಡಿಎಸ್ ಬಗ್ಗೆ ಚರ್ಚೆ ಅನಗತ್ಯ..!

ಮೈತ್ರಿ ಸರ್ಕಾರ ಬಿದ್ದೋಗುತ್ತದೆ ಎಂದ ಶೆಟ್ಟರ್....

SHARE......LIKE......COMMENT......

ಹುಬ್ಬಳ್ಳಿ:

ರಾಜ್ಯದಲ್ಲಿರುವ ಜೆಡಿಎಸ್ ಒಂದು ಕುಟುಂಬ ರಾಜಕಾರಣದ ಪಕ್ಷ. ಅದರ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ದೇಶದಲ್ಲಿರುವ ಬಹುತೇಕ ಪ್ರಾದೇಶಿಕ ಪಕ್ಷಗಳು ಒಂದು ಕುಟುಂಬಕ್ಕೆ ಸಂಬಂಧಿಸಿದ್ದವುಗಳೇ. ಪ್ರಾದೇಶಿಕ ಪಕ್ಷದ ಕಾರ್ಯಕರ್ತರು ಯೋಚಿಸಬೇಕು, ನಮಗೆ ಯಾವ ಪಾರ್ಟಿ ಉತ್ತಮ ಅಂತಾ. ದೇಶದಲ್ಲೇ ಕುಟುಂಬ ರಾಜಕಾರಣವಿರದ ಪಕ್ಷಯಾವುದಾದರೂ ಇದ್ದರೆ ಅದು ಭಾರತೀಯ ಜನತಾ ಪಾರ್ಟಿ ಎಂದು ಜಗದೀಶ್ ಶೆಟ್ಟರ್​ ಹೇಳಿದರು.

ಮೈತ್ರಿ ಸರ್ಕಾರ ನಿಗದಿಪಡಿಸಿರುವಂತೆ ಅಕ್ಟೋಬರ್​ 12 ರಂದು ಸಚಿವ ಸಂಪುಟ ವಿಸ್ತರಣೆ ಆಗುವುದಿಲ್ಲ. ಈ ಬಗ್ಗೆ ನಾನು ಬರೆದು ಕೊಡುತ್ತೇನೆ. ಸಚಿವ ಸಂಪುಟಕ್ಕೆ ಆರು ಜನ ಶಾಸಕರನ್ನು ಸೇರಿಸಿಕೊಳ್ಳಲಿ, ತಕ್ಷಣವೇ ಮೈತ್ರಿ ಸರ್ಕಾರ ಆಂತರಿಕ ಭಿನ್ನಮತದಿಂದ ಬಿದ್ದೋಗುತ್ತದೆ ಎಂದು ಶೆಟ್ಟರ್​ ಭವಿಷ್ಯ ನುಡಿದರು…….