Breaking News

ನಟರ ಮೇಲೆ IT ರೇಡ್ ಗೆ ಕೇಂದ್ರ ಸರ್ಕಾರ ಕಾರಣ..!?

ಮೋದಿ ಸರ್ಕಾರದ ಬಗ್ಗೆ ಸಿದ್ದು ಶಂಕೆ....

SHARE......LIKE......COMMENT......

ಬೆಂಗಳೂರು:

ಸ್ಯಾಂಡಲ್ವುಡ್ ನಟರ ಮೇಲೆ ಐಟಿ ಪ್ರಕರಣಕ್ಕೆ ಕೇಂದ್ರ ಸರ್ಕಾರದ ಕೈವಾಡದ ಶಂಕೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರು ಅನುಮಾನಿಸಿದ್ದಾರೆ….

ಸ್ಟಾರ್ ನಟರಾದ ಡಾ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್ , ಯಶ್ ಹಾಗೂ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ , ವಿಜಯ್ ಕಿರಂಗದೂರು, ಜಯಣ್ಣ ನಿವಾಸಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವ ಹಿಂದೆ ಕೇಂದ್ರ ಸರ್ಕಾರದ ಬಗ್ಗೆ ಅನುಮಾನವಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ “ತೆರಿಗೆ ಪಾವತಿಯಲ್ಲಿ ವ್ಯತ್ಯಾಸವಾಗಿದ್ದರೆ ಸಂಬಂಧಿತ ಲೆಕ್ಕಪತ್ರಗಳ ಪರಿಶೀಲನೆ ನಡೆಸುವ ಅಧಿಕಾರ ಆದಾಯ ತೆರಿಗೆ ಇಲಾಖೆಗೆ ಇದೆ. ಅದನ್ನು ಗೌರವಿಸೋಣ. ಆದರೆ, ಮೋದಿ ಸರ್ಕಾರದ ಐಟಿ ಇಲಾಖೆಯ ಕಾರ್ಯಶೈಲಿಯನ್ನು ಗಮನಿಸಿದರೆ ದಾಳಿ ಹಿಂದೆ ದುರುದ್ದೇಶ ಇರಬಹುದೆಂಬ ಅನುಮಾನ ಮೂಡುತ್ತಿದೆ” ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ….