ರೇಷ್ಮೆ ಸೇರಿ ಹಲವು ಬೆಳೆಗಳ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏರುಪೇರಾಗಿದೆ. ಸರ್ಕಾರದ ಕೆಲವು ಭಾವನೆಗಳು ಜನರ ಪರವಾಗಿದೆ ಎಂದು ನಾನೂ ಹೇಳುವುದಿಲ್ಲ. ಕುಮಾರಸ್ವಾಮಿಗೆ ಮುಖ್ಯಮಂತ್ರಿ ಆಗುವುದು ಅನಿವಾರ್ಯ ಆಗಿರಲಿಲ್ಲ. ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋತಿದ್ದರು. ಕಾಂಗ್ರೆಸ್ ಗೆಲ್ಲಲಿ ಎಂದು ಅಭ್ಯರ್ಥಿ ಹಾಕದಂತೆ ಎಚ್.ಡಿ.ಕುಮಾರಸ್ವಾಮಿಗೆ ತಿಳಿಸಿದ್ದೆ ಎಂದರು.
ನಾನೊಬ್ಬ ಹಠವಾದಿ. ಅಂದುಕೊಂಡಿದ್ದನ್ನು ಮಾಡುತ್ತೇನೆ. ನೆಮ್ಮದಿಯ ಅಂತ್ಯ ಕಾಣಬೇಕಾಗಿದೆ. ಮಾಡಬೇಕಾದ ಕೆಲಸಗಳು ತುಂಬ ಇವೆ. ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆ ಆಗಿದೆ. ನಾವು ನಮ್ಮ ಹಗೆತನವನ್ನು ಮರೆಯಬೇಕು. ನಾನು ಉದ್ವೇಗದ ಭಾಷಣ ಮಾಡುವುದಿಲ್ಲ. ವ್ಯಕ್ತಿ ನಿಂದನೆಯನ್ನೂ ಮಾಡುವುದಿಲ್ಲ. ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಲು ಬಂದಿದ್ದೇನೆ ಎಂದರು….