ದೆಹಲಿ, ಮುಂಬೈ:
ಸಮುದ್ರ ಮಾರ್ಗದಲ್ಲಿ ಜಿಹಾದಿ ಸುಳಿಗಳು ಏಳುವ ಸಾಧ್ಯತೆಯಿದ್ದು ನೌಕಾಪಡೆ, ಕೋಸ್ಟ್ ಗಾರ್ಡ್ಗೆ ಹೈ ಅಲರ್ಟ್ನಿಂದ ಇರುವಂತೆ ಸೂಚಿಸಲಾಗಿದೆ. ಈ ಹಿಂದೆ ಮುಂಬೈ ದಾಳಿ ವೇಳೆ ಪಾಕ್ ತೀರದಿಂದ ಬಂದು ದಾಳಿ ನಡೆಸಿದ್ದಂತೆ, ಪಾಕಿಸ್ತಾನದ ನೆಲೆಯಿಂದ ಹೊರಬಂದಿರುವ ಲಷ್ಕರ್ ಎ ತೊಯ್ಬಾ (LeT) ಉಗ್ರರು ಭಾರತದ ಬಂದರುಗಳು, ಸರಕು ಸಾಗಣೆ ಶಿಪ್ಗಳು, ಆಯಿಲ್ ಟ್ಯಾಂಕರ್ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಗುಪ್ತಚರ ಸಂಸ್ಥೆಯು ಮಾಹಿತಿ ಒದಗಿಸಿದ್ದು ಸಮುದ್ರದ ಮೂಲಕ ಭಾರತದ ಮೇಲೆ ದಾಳಿ ಮಾಡಲು (LeT) ಕೆಲವು ತಿಂಗಳುಗಳಿಂದ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಶೇಖರಿಸಿಡುತ್ತಿದೆ ಎಂದು ತಿಳಿಸಿದೆ. ಜೈಷ್ ಎ ಮೊಹಮದ್ (JeM) ಸಹ ಲಷ್ಕರೆ ತೊಯ್ಬಾ ಜೊತೆ ಕೈ ಜೋಡಿಸಿದ್ದು ಭಾರೀ ಈಜುಗಾರರು ಮತ್ತು ಸಮುದ್ರದಾಳದ ಡೈವರ್ಗಳನ್ನು ಸಜ್ಜುಗೊಳಿಸುತ್ತಿದೆ. ‘ಸಮುಂದರಿ ಜಿಹಾದ್’ ಹೆಸರಿನಲ್ಲಿ ಭವಾಲ್ಪುರದಲ್ಲಿ ಇವರಿಗೆಲ್ಲ ತರಬೇತಿ ನೀಡಲಾಗುತ್ತಿದೆ. ಪಾಕಿಸ್ತಾನದ ನೌಕಾಪಡೆ ಇವರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ತಿಳಿದುಬಂದಿದೆ……