ಸಿನಿಮಾ:
ಕಡಿಮೆ ಅವಧಿಯಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟ ವಿಜಯ್ ದೇವರಕೊಂಡ ಇದೀಗ ಬಾಲಿವುಡ್ಗೇ ಎಂಟ್ರಿ ನೀಡುವುದಕ್ಕೆ ಸಜ್ಜಾಗಿದ್ದಾರೆ.ತೆಲುಗಿನಲ್ಲಿ ಅವರ ‘ಪೆಳ್ಳಿಚೂಪುಲು’, ‘ಅರ್ಜುನ್ ರೆಡ್ಡಿ’, ‘ಗೀತ ಗೋವಿಂದಂ’ ಸಿನಿಮಾಗಳು ಹಿಟ್ ಆದಮೇಲೆ ಬೇರೆ ಭಾಷೆಗಳಲ್ಲೂ ಅವರಿಗೆ ಖ್ಯಾತಿ ದಕ್ಕಿತ್ತು. ಇದೀಗ 1983ರ ವಿಶ್ವಕಪ್ ಕ್ರಿಕೆಟ್ನ ವಿವರಗಳನ್ನೇ ಮುಖ್ಯವಾಗಿಟ್ಟುಕೊಂಡು ಸಿದ್ಧವಾಗುತ್ತಿರುವ ‘83’ ಸಿನಿಮಾದಲ್ಲಿ ಎಂಟ್ರಿ ನೀಡುವುದಕ್ಕೆ ಸಜ್ಜಾಗಿದ್ದಾರೆ! ಹೌದು, ರಣವೀರ್ ಸಿಂಗ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾಕ್ಕೆ ಕಬೀರ್ ಖಾನ್ ನಿರ್ದೇಶನ ಮಾಡುತ್ತಿದ್ದಾರೆ.
ರಣವೀರ್ಗೆ ಈ ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರ.ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂ ತ್ ಪಾತ್ರವನ್ನು ನಿಭಾಯಿಸುವುದಕ್ಕೆ ವಿಜಯ್ ದೇವರಕೊಂಡಗೆ ಆಫರ್ ಮಾಡಲಾಗಿದೆ. ಅವರ ಪಾತ್ರಗಳನ್ನು ರಣವೀರ್ ಹಾಗೂ ವಿಜಯ್ ಹೇಗೆ ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳದ್ದು. ಇನ್ನು,ಈ ಚಿತ್ರ ಯಾವಾಗ ತೆರೆಗೆ ಬರಲಿದೆ ಎಂಬ ಮಾಹಿತಿ ಸದ್ಯಕ್ಕಿಲ್ಲ……