ಬೆಂಗಳೂರು:
ರಾಜ್ಯದಲ್ಲಿ ಜನರ ಸುಲಿಗೆ ಮಾಡುವುದು ಎಗ್ಗಿಲ್ಲದೇ ಸಾಗುತ್ತಿದ್ದು, ಈ ಸಾಲಿನಲ್ಲಿ ಇದೀಗ ಬಿಎಂಟಿಸಿ ಬಸ್ ನಿಲ್ದಾಣದಳಲ್ಲಿರುವ ಶೌಚಾಲಯಗಳೂ ಬಂದು ನಿಂತಿವೆ. ಉಚಿತ ಸಾರ್ವಜನಿಕ ಶೌಚಾಲಯವೆಂದು ನಿರ್ಮಾಣ ಮಾಡಿದ್ದರೂ, ಜನರನ್ನು ಸುಲಿಗೆ ಮಾಡುವುದು ಮಾತ್ರ ನಿಂತಿಲ್ಲ.
ಕೆಲವರು ಇದನ್ನು ಚಿಲ್ಲರೆ ವ್ಯಾಪಾರವೆಂದು ತಿಳಿದಿದರೂ, ವಾಸ್ತವವಾಗಿ ಇಲ್ಲಿ ಲಕ್ಷಗಟ್ಟಲೆ ಸುಲಿಗೆಯಾಗುತ್ತಿದೆ.ನಿತ್ಯ ಬಸ್ ನಿಲ್ದಾಣಕ್ಕೆ ಬರುವ ಜನರು ನಿರ್ವಾಹಕರೊಂದಿಗೆ ಚಿಲ್ಲರೆಗಳಿಗಾಗಿ ಜಗಳವಾಡುತ್ತಾರೆ. ಆದರೆ, ಅದೇ ಪ್ರಯಾಣಿಕರು ತಮಗೆ ಅರಿವಿಲ್ಲದೆಯೇ ನಿಲ್ದಾಣಗಳ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆ ಮಾಡಲು ಹಿಂದೆ ಮುಂದೆ ಯೋಜನೆ ಮಾಡದೆಯೇ ಹಣವನ್ನು ನೀಡಿ ಶೌಚಾಲಯಗಳನ್ನು ಬಳಸುತ್ತಿದ್ದಾರೆ. ಇಲ್ಲಿ ವಸೂಲಿ ಮಾಡಿದ ಹಣ ತಿಂಗಳಿಗೆ ಲಕ್ಷಾಂತರ ರುಪಾಯಿ ದಾಟುತ್ತದೆ.
ಶೌಚಾಲಯಕ್ಕೆ ಆಗಮಿಸಿರುವ ಜನರು ಉಚಿತವಲ್ಲವೇ ಎಂದು ಪ್ರಶ್ನಿಸಿದರೆ, ಗುತ್ತಿಗೆದಾರರು ಸ್ವಚ್ಛತೆ ಎಂಬ ಹೆಸರನ್ನು ಬಳಕೆ ಮಾಡುತ್ತಾರೆ.
ಶಾಂತಿನಗರ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯ ಉಚಿತವಾಗಿದ್ದರೂ, ಜನರು ಶೌಚಾಲಯ ಪ್ರವೇಶಿಸುವುದಕ್ಕೂ ಮುನ್ನವೇ ಅವರಿಂದ ಬಳಿ ರೂ.5 ರಿಂದ 10 ಗಳನ್ನು ಪಡೆಯಲಾಗುತ್ತಿದೆ…..
ಒಂದು ವೇಳೆ ಚಿಲ್ಲರೆ ಇಲ್ಲದೆ ರೂ.2 ಬದಲಾಗಿ ರೂ.10 ನೀಡಿದರೆ, ಚಿಲ್ಲರೆ ಇಲ್ಲ ಎಂದು ಹೇಳಿ, ಉಳಿದ ಹಣವನ್ನು ಹಿಂತಿರುಗಿಸಲು ನಿರಾಕರಿಸುತ್ತಾರೆ……