ಮಧ್ಯಾಹ್ನವಾದರೂ ತೆಗೆಯದ ಗ್ರಾಪಂ ಕಚೇರಿ..!
ಆಕ್ರೋಶಗೊಂಡ ಗ್ರಾಮಸ್ಥರಿಂದ ಪ್ರತಿಭಟನೆ....
ಚಾಮರಾಜನಗರ:
ಮಧ್ಯಾಹ್ನವಾದರೂ ಗ್ರಾಪಂ ಕಚೇರಿ ತೆರೆಯದಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಹನೂರು ಕ್ಷೇತ್ರ ವ್ಯಾಪ್ತಿಯ ಧನಗೆರೆಯಲ್ಲಿ ನಡೆದಿದೆ.
ವಿವಿಧ ದಾಖಲಾತಿ, ಮಾಹಿತಿ ಪಡೆಯಲು ಮಧ್ಯಾಹ್ನ 3ರವರೆಗೂ ಕಾದ ರೈತರು ಆಕ್ರೋಶಗೊಂಡು ಗ್ರಾಪಂ ಕಚೇರಿ ಮುಂಭಾಗ ಪ್ರತಿಭಟಿಸಿ ಪಿಡಿಒ ವಿರುದ್ಧ ಘೋಷಣೆ ಕೂಗಿದರು. ಜಮೀನಿನ ಮಾಹಿತಿ ಪಡೆಯಲು ಬೆಳಗ್ಗೆಯಿಂದಲೂ ಕಾಯುತ್ತಿದ್ದರೂ ಪಿಡಿಒ ಆಗಲಿ, ಗ್ರಾಪಂ ಕಚೇರಿ ಸಿಬ್ಬಂದಿಯಾಗಲಿ ಪತ್ತೆಯೇ ಇಲ್ಲ ಎಂದು ಸ್ಥಳೀಯರೊಬ್ಬರು ದೂರಿದ್ದಾರೆ……