ಸಿನಿಮಾ:
ಕಿರಿಕ್ ಪಾರ್ಟಿ ಸಿನಿಮಾದಿಂದ ಕನ್ನಡ ಸಿನಿಪ್ರಿಯರ ಗಮನ ಸೆಳೆದ ರಶ್ಮಿಕಾ ಮಂದಣ್ಣ ಕರ್ನಾಟಕ ಕ್ರಶ್ ಅನಿಸಿಕೊಂಡ್ರು. ಸಾನ್ವಿಯಾಗಿ ಕರ್ಣ ಅಲಿಯಾಸ್ ರಕ್ಷಿತ್ ಜೊತೆ ರಶ್ಮಿಕಾ ಕಮಾಲ್ ಮಾಡಿದ್ರು. ರಶ್ಮಿಕಾ ಆಕ್ಟಿಂಗ್, ಹಾವ-ಭಾವ, ಸ್ಟೈಲು- ಮ್ಯಾನರಿಸಂ, ಡೈಲಾಗ್ ಡೆಲಿವರಿ ಹೀಗೆ ಪ್ರತಿಯೊಂದನ್ನೂ ಹಾಡಿ ಹೊಗಳಿದ್ರು ಸಿನಿಪ್ರಿಯರು.ರಶ್ಮಿಕಾ ಏನೇ ಮಾಡಿದ್ರು, ಅದ್ರ ಹಿಂದಿರೋ ಅಸಲಿ ಮಾಸ್ಟರ್ ಮೈಂಡ್ ರಕ್ಷಿತ್ ಶೆಟ್ಟಿ ಎನ್ನಲಾಗಿತ್ತು. ಆದ್ರೆ ಕಿರಿಕ್ ಪಾರ್ಟಿಗೆ ರಶ್ಮಿಕಾ ಎಂಟ್ರಿ ಕೊಡೋಕ್ಕೂ ಮೊದಲೇ, ರಕ್ಷಿತ್ ಶೆಟ್ಟಿ ಪರಿಚಯ ಆಗೋಕ್ಕೂ ಮುನ್ನವೇ ಆಕ್ಟಿಂಗ್ ಕರಗತ ಮಾಡಿಕೊಂಡು ಬಣ್ಣ ಹಚ್ಚಿದ್ರು ಅನ್ನೋದು ಕರುನಾಡಿಗೆ ತಿಳಿದಿಲ್ಲ
ಕಿರಿಕ್ ಪಾರ್ಟಿ ರಶ್ಮಿಕಾರ ಮೊದಲ ಸಿನಿಮಾ ಅಲ್ಲ. ಅದಕ್ಕೂ ಮೊದಲೇ ಗೆಳೆಯರೇ ಗೆಳತಿಯರೇ ಅನ್ನೋ ಸಿನಿಮಾಗಾಗಿ ಬಣ್ಣ ಹಚ್ಚಿದ್ರು ರಶ್ಮಿಕಾ ಮಂದಣ್ಣ. 2015ರಲ್ಲಿ ಇನ್ನೋವೇಟೀವ್ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಮುಂದಾಗಿದ್ದ ಈ ಸಿನಿಮಾಗಾಗಿ ರಶ್ಮಿಕಾ ಆಡಿಷನ್ಸ್ನಲ್ಲಿ ಸೆಲೆಕ್ಟ್ ಆಗಿದ್ರು. ರಶ್ಮಿಕಾ ಹಿಂದಿರೋ ಅಸಲಿ ಮಾಸ್ಟರ್ ಮೈಂಡ್ ಸಾಯಿಕೃಷ್ಣ. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ರ ಮಗ ಸಾಯಿಕೃಷ್ಣ ಮೂಲತಹ ನಟ ಕಮ್ ನಿರ್ದೇಶಕ. ಅವ್ರು ಕ ಸಿನಿಮಾದ ನಂತ್ರ ಇನ್ನೋವೇಟೀವ್ ಫಿಲ್ಮ್ ಸಿಟಿ ನಿರ್ಮಾಣದಲ್ಲಿ ಸಿನಿಮಾ ಮಾಡಲು ಮುಂದಾಗಿದ್ರು. ಅದೇ ಗೆಳೆಯರೇ ಗೆಳತಿಯರೇ.
ಸಾಯಿಕೃಷ್ಣ ಹೊಸಬರನ್ನ ಇಟ್ಟುಕೊಂಡು ಸಿನಿಮಾ ಮಾಡಿ ಗೆದ್ದಿದ್ದ ಮತ್ತೆ ಅಂತಹದ್ದೇ ಹೊಸಬರ ತಂಡ ಕಟ್ಟಿ ಸಿನಿಮಾ ಮಾಡೋ ಕನಸು ಕಂಡರು. ಆಗ ರಶ್ಮಿಕಾ ಜೊತೆ ಪ್ರಶೋಭಿತ, ಪಾಯಲ್ ರಾಧಕೃಷ್ಣ, ಸಯೇಶ್, ರಘುರಾಮ್, ಅಜಿತ್ ಹೀಗೆ ಒಂದಷ್ಟು ಹೊಸ ಪ್ರತಿಭೆಗಳನ್ನ ಆರಿಸಿಕೊಂಡು, ಅವ್ರನ್ನ ತಮ್ಮ ಗರಡಿಯಲ್ಲಿ ಪಳಗಿಸಿದ್ರು.ರಶ್ಮಿಕಾಗೆ ನಟನೆಯಿಂದ ಹಿಡಿದು, ಕ್ಯಾಮೆರಾ ಫೇಸ್ ಮಾಡೋವರೆಗೂ ಪ್ರತಿಯೊಂದನ್ನ ಧಾರೆ ಎರೆದ ಗುರು ಮಾತ್ರ ಇದೇ ಸಾಯಿಕೃಷ್ಣ. ಸಿನಿಮಾಗಾಗಿಯೇ ಬರೋಬ್ಬರಿ 8 ತಿಂಗಳು ಫಿಲ್ಮ್ ಸಿಟಿಯಲ್ಲೇ ಉಳಿದುಕೊಂಡ ಸಾಯಿಕೃಷ್ಣ, ರಶ್ಮಿಕಾ ಮತ್ತು ಉಳಿದ ಕಲಾವಿದರನ್ನ ಮೂರೂವರೆ ತಿಂಗಳ ಕಾಲ ಟ್ರೈನ್ ಮಾಡಿದ್ರು.ಆ ಸಿನಿಮಾ ಕಾರಣಾಂತರಗಳಿಂದ ನಿಂತೇ ಹೋಯ್ತು. ಅದೇನೇ ಇರಲಿ.. ಸದ್ಯ ತಾನು ಸಾಕಿದ ಗಿಣಿಗೆ ರೆಕ್ಕೆ ಬಂದಿದ್ದೇ ತಡ ಗೂಡು ಬಿಟ್ಟು ಹಾರಿಹೋಯ್ತು ಅಂತ ರಕ್ಷಿತ್ ಪರ ಮಾತನಾಡೋರಿಗೆ, ರಶ್ಮಿಕಾ ಅಸಲಿ ಗುರು ಯಾರು ಅನ್ನೋದನ್ನ ಬಿಚ್ಚಿಟ್ಟಿದ್ದಳು…….