ಸಿನಿಮಾ:
ರಕ್ಷಿತ್-ರಶ್ಮಿಕಾ ಮಂದಣ್ಣ ಒಂದು ಕಾಲದಲ್ಲಿ ಸ್ಯಾಂಡಲ್ವುಡ್ನ ಪ್ರಣಯ ಪಕ್ಷಿಗಳು. ಕೈ-ಕೈ ಹಿಡಿದು ಗಾಂಧಿನಗರ ಸುತ್ತುತ್ತಿದ್ದ ಈ ಚೆಂದದ ಜೋಡಿ ನಡುವೆ ಫ್ರೆಂಡ್ಶಿಫ್, ಲವ್, ಎಂಗೇಜ್ಮೆಂಟ್, ಬ್ರೇಕಪ್ ಎಲ್ಲಾ ಆಗಿ ತುಂಬಾ ದಿನಗಳೇ ಆಗಿವೆ. ಇಂಥಾ ಹೊತ್ತಲ್ಲೇ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಜೋಡಿ ಮತ್ತೆ ಒಂದಾಗೋ ಸುದ್ದಿ ಕೇಳಿ ಬರ್ತಿದೆ. ಕಿರಿಕ್ ಪಾರ್ಟಿ ಸಿನಿಮಾದ ಸಿಕ್ವೇಲ್ ರೆಡಿಯಾಗ್ತಿದೆಯಂತೆ. ‘ಕಿರಿಕ್ ಪಾರ್ಟಿ 2’ ಸಿನಿಮಾದಲ್ಲಿಯೂ ಸಹಾ ಈ ಜೋಡಿಯನ್ನು ತೆರೆ ಮೇಲೆ ನೋಡಬಹುದು. ಇದಕ್ಕಾಗಿ ಈಗಾಗಲೇ ಚಿತ್ರತಂಡ ತಯಾರಿ ನಡೆಸ್ತಿದೆ. ಕೆಲ ಮೂಲಗಳ ಪ್ರಕಾರ ಕೊಡಗಿನ ಕುವರಿ ರಶ್ಮಿಕಾಳನ್ನು ಸಹಾ ಅಪ್ರೋಚ್ ಮಾಡಿದ್ದಾರಂತೆ..ರಶ್ಮಿಕಾ ಸಹಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಆದ್ರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಗ್ರೀನ್ ಸಿಗ್ನಲ್ ಕೊಡ್ತಾರ ಅಂತ ಕಾದು ನೋಡಬೇಕಾಗಿದೆ.