Breaking News

ರಾಮಜನ್ಮಭೂಮಿ ವಿವಾದಕ್ಕೆ ಸಂಧಾನ ಸಮಿತಿ ರಚಿಸಿ ಸುಪ್ರೀಂಕೋರ್ಟ್​ ಆದೇಶ..!

ಎರಡು ತಿಂಗಳಲ್ಲಿ ವಿವಾದ ಬಗೆಹರಿಸಲು ಸಮಿತಿಗೆ ಗಡುವು...

SHARE......LIKE......COMMENT......

 ದೇಶ-ವಿದೇಶ:

ವಿವಾದಾತ್ಮಕ ಅಯೋಧ್ಯೆ-ರಾಮಜನ್ಮಭೂಮಿ ಪ್ರಕರಣವನ್ನು ಮಧ್ಯಸ್ಥಿಕೆಯ ಸಂಧಾನ ಸಮಿತಿ ರಚಿಸಿ ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠ ಮಹತ್ವದ ಆದೇಶ ಹೊರಡಿಸಿದೆ. ನ್ಯಾ.ರಂಜನ್​​ ಗೋಗೊಯ್​ ನೇತೃತ್ವದ ಪಂಚ ಸದಸ್ಯರ ಪೀಠ ಸಂಧಾನ ಸಮಿತಿ ರಚಿಸಿ ಆದೇಶಿಸಿದೆ. ಆಧ್ಯಾತ್ಮ ಗುರು ಹಾಗೂ ಆರ್ಟ್​​ ಆಫ್​ ಲಿವಿಂಗ್​ ಸ್ಥಾಪಕ ಶ್ರೀ ರವಿಶಂಕರ್​ ಗುರೂಜಿ, ಸುಪ್ರೀಂಕೋರ್ಟ್​​ನ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ಹಾಗೂ ಹಿರಿಯ ವಕೀಲ ಶ್ರೀರಾಮ್​ ಪಾಂಚುರನ್ನು ಸಂಧಾನಕಾರರನ್ನಾಗಿ ನೇಮಿಸಿ ಸುಪ್ರೀಂ ಆದೇಶ ಹೊರಡಿಸಿದೆ.

ಒಂದು ವಾರದೊಳಗೆ ಸಂಧಾನ ಪ್ರಕ್ರಿಯೆ ಆರಂಭಿಸಿ 2 ತಿಂಗಳೊಳಗೆ ಸಂಧಾನ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಅಲ್ದೇ, ಉತ್ತರ ಪ್ರದೇಶದ ಫೈಜಾಬಾದ್​ನಲ್ಲಿ ಸಂಧಾನ ನಡೆಸಿ, ಸಂಧಾನದ ಮಾಹಿತಿ ಮಾಧ್ಯಮಗಳಿಗೆ ನೀಡದಂತೆ ಸುಪ್ರೀಂ ಸೂಚನೆ ನೀಡಿದೆ……