ಬೆಂಗಳೂರು:
ರಫೇಲ್ ಒಪ್ಪಂದದ ಆರಂಭ ಹಾಗೂ ನಂತರ ವಿದ್ಯಾಮಾನಗಳಿಗೆ ಅನುಸಾರವಾಗಿ ಬಿಜೆಪಿ ಶಾಸಕ ಸಿ.ಟಿ.ರವಿ ಹಾಗೂ ವಕ್ತಾರ ಅಶ್ವತ್ಥ್ ನಾರಾಯಣ ಅವರು ಕಾಂಗ್ರೆಸ್ ಪಕ್ಷ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಮುಂದೆ ಆರು ಪ್ರಶ್ನೆ ಇಟ್ಟಿದ್ದ ಬಿಜೆಪಿ
1. 126 ಎಂಎಂಆರ್ಸಿಎ ವಿಮಾನವನ್ನು ಡಸಾಲ್ಟ್ನಿಂದ ಖರೀದಿಸಲು ಯುಪಿಎ ಸರ್ಕಾರ 2012ರಲ್ಲೇ ಒಪ್ಪಂದ ಮಾಡಿಕೊಂಡಿದ್ದರೂ, 2014ರವರೆಗೂ ಯಾವುದೇ ಕ್ರಮ ಕೈಗೊಳ್ಳದೇ ರಾಷ್ಟ್ರದ ಸುರಕ್ಷತೆಯೊಂದಿಗೆ ನೀವು ಮಾಡಿಕೊಂಡ ರಾಜಿಯಲ್ಲವೇ?
2. ರಫೇಲ್ ಒಪ್ಪಂದದ ಕುರಿತು ಡಸಾಲ್ಟ್ ಹಾಗೂ ಎಚ್ಎಎಲ್ ನಡುವೆ ಮೂಡಿದ್ದ ಭಿನ್ನಮತ ಪರಿಹರಿಸಲು ಪ್ರಯತ್ನಿಸದೆ ಎಚ್ಎಎಲ್ ಅನ್ನು ಒಪ್ಪಂದದಿಂದ ದೂರ ದೂಡಿದ್ದು ನೀವು ಮಾಡಿದ ದ್ರೋಹವಲ್ಲವೇ?
3. ಒಪ್ಪಂದದಲ್ಲಿ ಮುಂದುವರಿಯದೆ, ಭಾರತದೊಂದಿಗೆ ಇಂತಹ ಒಪ್ಪಂದಗಳನ್ನು ಕೈಗೊಳ್ಳವುದು ಕಠಿಣ ಎಂಬಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ, ದುರಾಭಿಪ್ರಾಯ ಮೂಡಿಸಿದ್ದು ಯಾಕೆ?,
4. ನೀವು ಹೊರಡಿಸಿದ 2007ರ ಆರ್ಪಿಎಫ್ ಪ್ರಕಾರ ಗ್ರೀನ್ ವಿಮಾನ ದರ 737 ಕೋಟಿ ರೂ. ಅದೇ ವಿಮಾನಕ್ಕೆ 2015ರಲ್ಲಿ ಎನ್ಡಿಎ ಸರ್ಕಾರ 670 ಕೋಟಿ ರೂ.ಗೆ ಮಾತುಕತೆ ನಡೆಸಿತ್ತು. ಈ ಸತ್ಯ ಮುಚ್ಚಿಟ್ಟು ದೇಶದ ಜನರ ದಾರಿ ತಪ್ಪಿಸುತ್ತಿದ್ದೀರಲ್ಲವೇ ಇದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
5. ಯಾವುದೇ ಕ್ಷಿಪಣಿಗಳಿಲ್ಲದ ವಿಮಾನ ಮಾತ್ರ ಖರೀದಿ ಬದಲಿಗೆ ಪೂರ್ಣಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಜ್ಜಿತ ವಿಮಾನ ಖರೀದಿಸಲಾಗಿದೆ. ಇವೆರಡೆ ವ್ಯತ್ಯಾಸ ತಿಳಿಸದೆ ಕೇವಲ ದರದೊಂದಿಗೆ ಹೋಲಿಕೆ ಮಾಡಿ ಜನರ ಕಣ್ಣಿಗೆ ಮಂಕು ಬೂದಿ ಎರಚುವ ಪ್ರಯತ್ನ ಏಕೆ ನಡೆಸುತ್ತಿದ್ದೀರಿ?,
6. ಒಪ್ಪಂದದಿಂದ ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ರೂ. ಲಾಭವಾಗಿದೆ ಎಂದು ಹೇಳುತ್ತಿದ್ದೀರಲ್ಲ. ಆದರೆ, ಭಾರತದಲ್ಲಿ ತಾನು ಒಪ್ಪಂದ ಮಾಡಿಕೊಂಡಿರುವ 100 ಕಂಪೆನಿಗಳ ಪೈಕಿ ರಿಲಯನ್ಸ್ ಸಹ ಒಂದು, ಈ ಕಂಪನಿ ಮೇಲೆ ಒಟ್ಟು ಒಪ್ಪಂದದ ಶೇ.10 ಅಂದರೆ 3 ಸಾವಿರ ಕೋಟಿ ರೂ. ಹೂಡಿಕೆ ಎಂದು ಸ್ವತಃ ಡಸಾಲ್ಟ್ ಸಂಸ್ಥೆ ಸ್ಪಷ್ಟಪಡಿಸಿದ್ದು, ಆ ಬಗ್ಗೆ ಏನು ಹೇಳಿತ್ತಿಲ್ಲ ಏಕೆ ಎಂದುರಾಹುಲ್ಗೆ 6 ಪ್ರಶ್ನೆ ಹಾಕಿದ ಬಿಜೆಪಿ