Breaking News

ರಾಹುಲ್ ಗಾಂಧಿಗೆ ಬಿಎಸ್ ವೈ ಸವಾಲ್..!

ಡೈರಿ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ....

SHARE......LIKE......COMMENT......

ಬೆಂಗಳೂರು:

ರಾಹುಲ್ ಗಾಂಧಿ ಡೈರಿ ಆರೋಪ ಸಾಬೀತುಪಡಿಸಿದ್ರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಬಿಎಸ್ ವೈ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದಾರೆ. ನನ್ನ ವಿರುದ್ಧದ ಬಿಜೆಪಿ ಕೇಂದ್ರ ನಾಯಕರಿಗೆ 1800 ಕೋಟಿ ರುಪಾಯಿ ಕಪ್ಪ ನೀಡಿದ ಆರೋಪ ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲದಿದ್ದರೆ ಅವರು ರಾಜೀನಾಮೆ ನೀಡಬೇಕು ಎಂದು ಅಗ್ರಹಿಸಿದ್ದಾರೆ. ನೆನ್ನೆ ನಗರದಲ್ಲಿ ನಡೆದ ಕಾಂಗ್ರೆಸ್​-ಜೆಡಿಎಸ್​ ಜಂಟಿ ಸಮಾವೇಶದಲ್ಲಿ ರಾಹುಲ್ ​ಗಾಂಧಿ ಬಿ.ಎಸ್ ಯಡಿಯೂರಪ್ಪ ಅವರ 1800 ಕೋಟಿ ರು. ಡೈರಿ ವಿಚಾರ ಪ್ರಸ್ತಾಪಿಸಿದ್ದರು.ಇದರ ಬೆನ್ನಲ್ಲೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಎಸ್ ವೈ, 1800 ಕೋಟಿ ರು.ಡೈರಿ ನಕಲಿ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಹೇಳಿದ್ದಾರೆ. ಆದರೆ ಮತ್ತೆ ಇಂಥ ಹೇಳಿಕೆಗಳನ್ನು ನೀಡುವ ಮೂಲಕ ಕಳಂಕ ರಹಿತ ನಾಯಕಾರದ ಅರುಣ್​ ಜೇಟ್ಲಿ, ನಿತಿನ್​ ಗಡ್ಕರಿ, ರಾಜನಾಥ್​ ಸಿಂಗ್​ ಮತ್ತು ನನಗೆ ಅವಮಾನ ಮಾಡುತ್ತಿದ್ದಾರೆ. ಇಂಥ ಅವಹೇಳನ ಒಪ್ಪುವುದಿಲ್ಲ ಎಂದಿದ್ದಾರೆ……