ಬೆಂಗಳೂರು:
ಕಾಂಗ್ರೆಸ್-ಬಿಜೆಪಿ ನಡುವೆ ಹಫ್ತಾ ಡೈರಿ ಸಮರ ತಾರಾಕಕ್ಕೆ ಏರುತ್ತಿದೆ… ನಿನ್ನೆ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೇವಾಲ ಬಿಡುಗಡೆ ಮಾಡಿದ ಡೈರಿ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಟ್ವೀಟ್ ಮಾಡಿದ್ದಾರೆ. ಸುರ್ಜೇವಾಲ ರಿಲೀಸ್ ಮಾಡಿದ್ದ ದಾಖಲೆ ಮತ್ತೊಂದು ನಕಲಿ ದಾಖಲೆಯನ್ನ ಟ್ವೀಟ್ ಮಾಡುವ ಮೂಲಕ ಇವೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಎರಡು ಪ್ರತ್ಯೇಕ ನಕಲಿ ದಾಖಲೆಯಲ್ಲಿ ಒಂದೊಂದು ಅಂಶ ವಿಭಿನ್ನವಾಗಿದೆ. ಒಂದರಲ್ಲಿ ಫೇಕ್ ಡೈರಿಯಲ್ಲಿ ಗಡ್ಕರಿ ಮಗನ ಮದ್ವೆಗೆ1000 ಕೋಟಿ ಅಂತಿದೆ. ಎಡಿಟೆಡ್ ಡೈರಿಯಲ್ಲಿ 10 ಕೋಟಿ ಅಂತಾ ಉಲ್ಲೇಖಿಸುತ್ತಾರೆ ಫೇಕ್ ಡೈರಿ ಎಡಿಟ್ ಮಾಡಿ ರಿಲೀಸ್ ಮಾಡಿದ್ದಾರೆ ಎಂದು ಬಿಎಸ್ವೈ ತಿರುಗೇಟು ನೀಡಿದ್ದಾರೆ…….
ಈ ಮಧ್ಯೆ ಬಿಜೆಪಿ ನಾಯಕರು ಕಾಂಗ್ರೆಸ್ಗೆ ಡೈರಿ ಆರೋಪ ಸಂಬಂಧ 10 ಪ್ರಶ್ನೆಗಳನ್ನು ಹಾಕಿದ್ದಾರೆ. ಡೈರಿ ಸಿಕ್ಕಿದ್ದು ಎಲ್ಲಿ..ಡೈರಿ ಬಗ್ಗೆ ಈವರೆಗೂ ಯಾಕೆ ದೂರು ಕೊಟ್ಟಿಲ್ಲ. ಡೈರಿ ತಂದುಕೊಟ್ಟವರು ಯಾರು..? ಹೀಗೆಲ್ಲಾ ಪ್ರಶ್ನೆಗಳ ಸುರಿಮಳೆಯನ್ನೇ ಹಾಕಿದ್ದಾರೆ.ಬಿಜೆಪಿ ನಾಯಕರು ತಿರುಗೇಟಿಗೆ ಕೆಪಿಸಿಸಿ ಅಧ್ಯಕ್ಷರ ಟಾಂಗ್ ಕೊಟ್ಟದ್ದು ,ಹಣಕಾಸು ಇಲಾಖೆ ಅರುಣ್ ಜೇಟ್ಲಿ ಕೈಲಿದೆ ,ಜೇಟ್ಲಿ, ರಾಜನಾಥ್ ಹೆಸರು ಡೈರಿಯಲ್ಲಿದೆ..ತನಿಖೆ ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ…….