Breaking News

ಶೀಘ್ರ ಕೆರೆ ಒತ್ತುವರಿ ತೆರವು……

ತಹಸೀಲ್ದಾರ್ ಗಮನಕ್ಕೆ ತಂದು ಸರ್ವೆ.....

SHARE......LIKE......COMMENT......

ಬೂದಿಕೋಟೆ: 

ರಾಮಚಂದ್ರರಾಯ ಕೆರೆ, ಬಾಲಕೆರೆ ಹಾಗೂ ರಾಜಕಾಲುವೆ ಒತ್ತುವರಿಯಾಗಿರುವ ಬಗ್ಗೆ ತಹಸೀಲ್ದಾರ್ ಗಮನಕ್ಕೆ ತಂದು ಶೀಘ್ರ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ರಾಜಸ್ವ ನಿರೀಕ್ಷಕ ವಿಜಯದೇವ್ ತಿಳಿಸಿದರುಬಂಗಾರಪೇಟೆ ತಹಸೀಲ್ದಾರ್ ಚಂದ್ರಮೌಳೇಶ್ವರ್ ಕೆರೆ ಒತ್ತುವರಿ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ರಾಜಸ್ವ ನಿರೀಕ್ಷಕ ಹಾಗೂ ಗ್ರಾಮಲೆಕ್ಕಿಗರಿಗೆ ಆದೇಶಿದ್ದರು.

ತಹಸೀಲ್ದಾರ್ ಆದೇಶದಂತೆ ಸೋಮವಾರ ರಾಜಸ್ವ ನಿರೀಕ್ಷಕ ವಿಜಯದೇವ್ ಹಾಗೂ ಗ್ರಾಮ ಲೆಕ್ಕಿಗ ಸುರೇಶ್ ಕುಮಾರ್, ರಾಮಚಂದ್ರರಾಯ ಕೆರೆ, ಬಾಲಕೆರೆ ಹಾಗೂ ರಾಜಕಾಲುವೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ಕೆರೆ ಸುತ್ತ ಹತ್ತಾರು ಎಕರೆ ಕೆರೆಯ ಅಂಗಳ ಹಾಗೂ ರಾಜಕಾಲುವೆ ಒತ್ತುವರಿ ಮಾಡಿರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಇದರ ಬಗ್ಗೆ ವರದಿ ತಯಾರಿಸಿ ತಹಸೀಲ್ದಾರ್ ಗಮನಕ್ಕೆ ತಂದು ಶೀಘ್ರ ಸರ್ವೆ ನಡೆಸಿ ಒತ್ತುವರಿ ಭೂಮಿ ತೆರವುಗೊಳಿಸಲಾಗುವುದು ಎಂದು ತಿಳಿಸಿದರು…….