ಬೆಂಗಳೂರು:
ರಾಜೀನಾಮೆ… ರಾಜೀನಾಮೆ…ರಾಜೀನಾಮೆ…. ಎಂಬ ಬಾಂಬ್ ಸಿಡಿಸಿ ಬೆಂಗಳೂರಿಗೆ ಬಂದಿರೋ ಬೆಳಗಾವಿ ಸಾಹುಕಾರ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡೆ ಇನ್ನೂ ನಿಗೂಢವಾಗಿದೆ ಇದರ ಬೆನ್ನಲ್ಲೇ ಮತ್ತೆ ಏಕಾಂಗಿಯಾದ್ರಾ ಸಾಹುಕಾರ್ ರಮೇಶ್ ಜಾರಕಿಹೊಳಿ ಎಂಬ ಪ್ರಶ್ನೆ ಕೇಳಿ ಬರುತಿದೆ ಯಾಕೆಂದರೆ ನಿನ್ನೆ ಆಪ್ತರ ಜತೆ ಸಭೆ ನಡೆಸುವ ರಮೇಶ್ ಜಾರಕಿಹೊಳಿ ಪ್ರಯತ್ನವೂ ವಿಫಲಗೊಂಡಿದೆ ಸಭೆಗೆ ಬರಬೇಕಿದ ಮಹೇಶ್ ಕುಮಠಳ್ಳಿ, ನಾಗೇಂದ್ರ, ಪ್ರತಾಪ್ಗೌಡ ಸಭೆಗೆ ಬಾರದೆ ಮತ್ತಷ್ಟು ರೋಚಕ ತಿರುವು ಕೊಟ್ಟಿದ್ದಾರೆ..ಮತ್ತೊಂದೆಡೆ ರಮೇಶ್ ಸಂಪರ್ಕದಲ್ಲಿದ್ದ ಶಾಸಕರ ಜತೆ ದೋಸ್ತಿ ನಾಯಕರ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಕೊಡ ಕೇಳಿಬಂದಿದೆ,,,,,,