Breaking News

ಸಿಲಿಕಾನ್ ಸಿಟಿಯಲ್ಲಿ ವಿವಿಧ ರೀತಿಯಲ್ಲಿ ಕಳ್ಳತನ..!

ಟ್ರಾಫಿಕ್ ಫೈನ್ ತಪ್ಪಿಸಿಕೊಳ್ಳೋಕೆ ಹೆಲ್ಮೆಟ್ ಜೊತೆಗೆ ಮಿರರ್, ವ್ಹೀಲ್‍ಗೂ ಕನ್ನ....

SHARE......LIKE......COMMENT......

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿವಿಧ ರೀತಿಯಲ್ಲಿ ಕಳ್ಳತನಗಳು ನಡೆಯುತ್ತಲೇ ಇರುತ್ತವೆ. ಹೌದು. ಸಾರ್ವಜನಿಕರ ಸರ್ವಿಸ್‍ಗೆ ಸಿಗುವ ಬೈಕ್‍ಗಳನ್ನ ಬಾಡಿಗೆ ಪಡೆಯುವ ಹಲವರಲ್ಲಿ ಕೆಲವರು ಚಿಲ್ಲರೆ ಕಳ್ಳತನ ಶುರು ಮಾಡಿದ್ದಾರೆ. ಅದು ಟ್ರಾಫಿಕ್ ದಂಡ ದುಬಾರಿಯಾದ ಮೇಲೆ ಕಳ್ಳತನ ದುಪ್ಪಾಟಾಗಿದೆ. ಪೊಲೀಸಪ್ಪನಿಗೆ ಹೆದರಿ ದಂಡ ತಪ್ಪಿಸಿಕೊಳ್ಳಲು ಹೆಲ್ಮೆಟ್, ಮಿರರ್ ಹಾಗೂ ಚಕ್ರಗಳನ್ನ ಕದಿಯುತ್ತಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 10 ಸಾವಿರ ಖಾಸಗಿ ದ್ವಿಚಕ್ರ ವಾಹನಗಳು ಬಾಡಿಗೆಗೆ ಸಿಗುತ್ತಿವೆ. ಕಿ.ಮೀಗೆ 4 ರಿಂದ 6 ರೂ. ಗೆ ಈ ವಾಹನಗಳು ಸಿಗುತ್ತಿವೆ. ಇದನ್ನ ಬಳಸಿಕೊಂಡು ಹಾಗೇ ಬೈಕ್ ಬಿಟ್ಟರೆ ಸಮಸ್ಯೆಯಾಗಲ್ಲ. ಆದರೆ ಹಲವರು ಉಂಡು ಹೋದ ಕೊಂಡು ಹೋದ ಎಂಬಂತೆ ಮೊದಲು ಹೆಲ್ಮೆಟ್, ಮಿರರ್, ವ್ಹೀಲ್‍ಗಳನ್ನೂ ಎಗರಿಸ್ತಾರೆ. ಇದನ್ನು ಚಿಲ್ಲರೆಗೆ ಕದ್ದು ಚಿಲ್ಲರೆ ದುಡ್ಡಿಗೆ ಮಾರಾಟ ಮಾಡುತ್ತಿದ್ದಾರೆ. ಹೀಗೆ ಹೆಲ್ಮೆಟ್ ಕದಿಯೋರಿಗೆ ಶಾಕ್ ಕೊಡಲು ಬೌನ್ಸ್ ಕಂಪನಿ ಸಿಬ್ಬಂದಿ ಫೀಲ್ಡ್ ಗೆ ಇಳಿದಿದ್ದರು. ಕದ್ದ ಮಾಲು ವಾಪಸ್ ಕೊಡಿ. ನಮ್ ಹೆಲ್ಮೆಟ್ ವಾಪಸ್ ಕೊಡಿ ಎಂದು ದಿಢೀರ್ ದಾಳಿ ಮಾಡಿದರು. ಈ ಬಗ್ಗೆ ಬೇರೆ ಬೇರೆ ಕಂಪನಿಗಳು ಕೂಡ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ…..