ಸ್ಯಾನ್ಫ್ರಾನ್ಸಿಸ್ಕೋ:
ಸ್ಮಾರ್ಟ್ಫೋನ್ಗಳ ದೈತ್ಯ ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ ಇದೇ ಮೊದಲ ಬಾರಿಗೆ 5ಜಿ ಸ್ಮಾರ್ಟ್ಫೋನ್ ಪರಿಚಯಿಸಿದ್ದು, ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿರದ ಮಡಚುವ 4.6 ಸ್ಮಾರ್ಟ್ಫೋನ್ ಸಹ ಬಿಡುಗಡೆ ಮಾಡಲು ಮುಂದಾಗಿದೆ. ಇದೇ ಸ್ಮಾರ್ಟ್ ಫೋನ್ ಪೂರ್ಣ ತೆರೆದುಕೊಂಡಾಗ 7.3 ಇಂಚಿನ ಟ್ಯಾಬ್ಲೆಟ್ ಆಗಿ ಪರಿವರ್ತನೆ ಆಗಲಿದೆ. ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಈ ಹೊಸ ಗೆಲಾಕ್ಸಿ ಪೋಲ್ಡ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ.
ನಾವು ನಿಮಗೆ ಹೊಸ ಆವಿಷ್ಕಾರದ ಡಿವೈಸ್ ನೀಡುತ್ತಿದ್ದೇವೆ ಎಂದು 5ನೇ ತಲೆಮಾರಿನ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿ, ಸ್ಯಾಮ್ಸಂಗ್ನ ಜಸ್ಟಿನ್ ಡೆನಿಸನ್ ಹೇಳಿದ್ದಾರೆ. ವಿಶೇಷ ಎಂದರೆ ಗೆಲಾಕ್ಸಿ ಫೋಲ್ಡ್ 5 ಜಿ ಫೋನ್ ಏಪ್ರಿಲ್ 26ರ ರಂದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದರ ಬೆಲೆ 1980 ಅಮೆರಿಕನ್ ಡಾಲರ್ ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ ಭಾರತೀಯ ಲೆಕ್ಕದಲ್ಲಿ 1.41 ಲಕ್ಷ ರೂ ಆಗಲಿದೆ……