ಹಸೆಮಣೆ ಏರುತ್ತಿರುವ ರಾಖಿ ಸಾವಂತ್..!
ಲಗ್ನಪತ್ರಿಕೆ ಪೋಸ್ಟ್ ಮಾಡಿದ ಹಾಟ್ ಬೆಡಗಿ....
ಅಂದಹಾಗೆ ವಿವಾದಿತ ರಾಣಿ ರಾಖಿಯನ್ನು ವರಿಸುತ್ತಿರುವ ವರ ಇಂಡಿಯಾದ ಗೊಟ್ ಟ್ಯಾಲೆಂಟ್ ಸ್ಪರ್ಧಿ ದೀಪಕ್ ಕಲಾಲ್. ಇವರಿಬ್ಬರ ಮದುವೆ ಡಿಸೆಂಬರ್ 31ರಂದು ಸಂಜೆ 5:55ರ ವೇಳೆಗೆ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆಯಲಿದೆ.
ಇತ್ತೀಚೆಗೆ ಬಾಲಿವುಡ್ನಲ್ಲಿ ಹಲವು ಮದುವೆಯಾಗುತ್ತಿದ್ದು, ನಾನೂ ಮದುವೆಯಾಗಲು ಇದು ಸೂಕ್ತ ಸಮಯ ಎನಿಸಿತು ಎಂದೂ ರಾಖಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ತಾನು ನಿಜವಾಗಿಯೂ ಮದುವೆಯಾಗುತ್ತಿದ್ದು, ಜನರು ನನ್ನನ್ನು ಗಂಭೀರವಾಗಿ ಪರಿಗಣಿಸಬೇಕು ಎಂದೂ ಮನವಿ ಮಾಡಿದ್ದಾರೆ.
ಈಗಾಗಲೇ ಇಬ್ಬರು ಹುಡುಗರೊಂದಿಗೆ ಲವ್ವಿಡವ್ವಿ ಮಾಡಿ, ಬ್ರೇಕ ಅಪ್ ಮಾಡಿಕೊಂಡಿರುವ ರಾಖಿ ಈಗ ನಿಜವಾಗಿಯೂ ಮದುವೆಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ.