Breaking News

‘ಹೈಕಮಾಂಡ್ ಜೊತೆ ಚರ್ಚಿಸಿ, ದಾಖಲೆ ಬಿಡುಗಡೆ ಮಾಡ್ತೀನಿ’

ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ವೈಯಕ್ತಿಕವಾಗಿ ನನಗೆ ಗೌರವ ಇದೆ

SHARE......LIKE......COMMENT......

ದಾವಣಗೆರೆ: ಬಿಜೆಪಿಯಿಂದ ₹ 30 ಕೋಟಿ ಆಫರ್ ನೀಡಿದ್ದ ದಾಖಲೆಗಳನ್ನ ಹೈಕಮಾಂಡ್ ಜೊತೆ ಚರ್ಚಿಸಿ ಬಿಡುಗಡೆ ಮಾಡ್ತೀನಿ ಅಂತಾ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾನು ಬೇರೆಯವರ ಮನೆಯ ಕಿಟಕಿಯನ್ನ ಇಣುಕಿ ನೋಡೋದಿಲ್ಲ. ನನ್ನ ಮನೆಯಲ್ಲಿ ನಾನು ಜೀವನ ಮಾಡ್ತೀನಿ. ಸದ್ಯಕ್ಕೆ ಬೆಳಗಾವಿ ರಾಜಕಾರಣ ತಣ್ಣಗಾಗಿದೆ ಎಂದರು. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ವೈಯಕ್ತಿಕವಾಗಿ ನನಗೆ ಗೌರವ ಇದೆ. ಸಮಯ ಬಂದಾಗ ಎಲ್ಲಾ ಆರೋಪಗಳಿಗೂ ಉತ್ತರ ಕೊಡುತ್ತೇನೆ ಎಂದರು.