ಬೆಳಗಾವಿ:
ಹೊಸ ಮೈಲಿಗಲ್ಲಿಗೆ ಸಾಕ್ಷಿಯಾದ ಕಿತ್ತೂರು ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ,ಅಮೆರಿಕಾದ ಸಗೀನಾ ವ್ಯಾಲಿ ವಿಶ್ವವಿದ್ಯಾಲಯ ಮತ್ತು ಸಗೀನಾ ಟೌನ್ಶಿಪ್ ಸಮುದಾಯ, ಯುಎಸ್ಎ ಇವುಗಳ ಮಧ್ಯೆ ತ್ರಿಪಕ್ಷೀಯ ಒಡಂಬಡಿಕೆ ಮಾಡಿಕೊಂಡಿದೆ.
ನಗರದ ವಾರ್ತಾ ಇಲಾಖೆಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿಎಸ್ ಸಿಂಧೆ, ಕಿತ್ತೂರು ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯು ಅಮೆರಿಕಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಜೊತೆಗಿನ ಒಡಂಬಡಿಕೆಯಿಂದ ನಮ್ಮಲ್ಲಿರುವ ಕಲೆ ಸಂಸ್ಕೃತಿಗಳ ವಿನಿಯೋಗವಾಗುವುದು. ಜೊತೆಗೆ ಮಕ್ಕಳು ಮತ್ತು ಶಿಕ್ಷಕರ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುವುದು ಎಂದು ಅಭಿಪ್ರಾಯಪಟ್ಟರು…….