Breaking News

ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಯುವಕನ್ನೊಬ್ಬ ಹಲ್ಲೆ..!

ಬೆಂಗಳೂರಿನ ಪೆಟ್ರೋಲ್ ಬಂಕ್‌ನಲ್ಲಿ ಘಟನೆ.....

SHARE......LIKE......COMMENT......

ಬೆಂಗಳೂರು:

ಮಹಿಳೆ ಮೇಲೆ ಯುವಕನ್ನೊಬ್ಬ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ನಡೆದಿದೆ. ಕಳೆದ ಶುಕ್ರವಾರ ಬಸವೇಶ್ವರನಗರದ ಹೆಚ್​ಪಿ ಪೆಟ್ರೋಲ್ ಬಂಕ್​​ನಲ್ಲಿ ಶೋಭಾ ಅನ್ನೋರು ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ರು. ಇದೇ ಟೈಮಲ್ಲಿ ಹಿಂದಿನಿಂದ ಬಂದ ಯುವಕನೊಬ್ಬ ಮಹಿಳೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುತ್ತಾನೆ. ಇದನ್ನ ಪ್ರಶ್ನಿಸಿದ ಶೋಭಾಗೆ ಆ ಯುವಕ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾನೆ. ಅಲ್ದೇ ಮಹಿಳೆ ಮೇಲೆಯೇ ಹಲ್ಲೆಗೆ ಮುಂದಾಗಿ, ವಾಹನಕ್ಕೆ ಡ್ಯಾಮೇಜ್ ಮಾಡಿದ್ದಾನೆ. ಹಲ್ಲೆ ನಂತ್ರ ಯುವಕ ಪರಾರಿಯಾಗಿದ್ದು, ಘಟನೆಯ ದೃಶ್ಯ ಪೆಟ್ರೋಲ್​​​ ಬಂಕ್​​ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…..