Breaking News

ಯಾರಾಗ್ತಾರೆ KCC ಬ್ಯಾಂಕ್ ಅಧ್ಯಕ್ಷ..?

ಗಡಿಯಾರ ಬ್ಯಾಂಕ್ ಚುನಾವಣೆಯ ಬಿರುಸಿನ ಫೈಟ್....

SHARE......LIKE......COMMENT......

ಧಾರವಾಡ:

ಉಪ ಚುನಾವಣೆ ಮುಗಿದ ಮೇಲೆ ಕೆಸಿಸಿ ಬ್ಯಾಂಕ್ ಅಧ್ಯಕ್ಷಗಿರಿಗೆ ಅದಕ್ಕಿಂತಲೂ ಬಿರುಸಿನ ಪೈಪೋಟಿ ನಡೆದಿದೆ.ಕರ್ನಾಟಕ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಕಳೆದ ವರ್ಷವಷ್ಟೇ ಶತಮಾನೋತ್ಸವ ಆಚರಿಸಿಕೊಂಡಿದೆ.

ಅವಿಭಜಿತ ಧಾರವಾಡ ಜಿಲ್ಲಾ (ಧಾರವಾಡ, ಗದಗ, ಹಾವೇರಿ) ವ್ಯಾಪ್ತಿ ಹೊಂದಿ, ಬ್ಯಾಂಕಿಂಗ್ ಕ್ಷೇತ್ರದ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತ ಮುಂಚೂಣಿಯಲ್ಲಿದೆ. ಮೂರು ಜಿಲ್ಲೆಗಳಲ್ಲಿ 44 ಶಾಖೆಗಳನ್ನು ಹೊಂದಿರುವ ಬ್ಯಾಂಕ್, ಇಂದಿಗೂ ಗಡಿಯಾರ ಬ್ಯಾಂಕ್’ ಎಂದೇ ಖ್ಯಾತಿ ಗಳಿಸಿದೆ.

ಕಾಂಗ್ರೆಸ್ ಬೆಂಬಲಿತ ಹಾಲಿ ಅಧ್ಯಕ್ಷ ಐ.ಎಸ್. ಪಾಟೀಲ ಮತ್ತೊಂದು ಅವಧಿಗೆ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಮತ್ತು ಪ್ರತಿಸ್ಪರ್ಧಿ ಪ್ರಕಾಶ ಕೆಂಚಮಲ್ಲ ತಲಾ 6 ಮತ ಪಡೆದಿದ್ದರು. ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ಅದೃಷ್ಟ ಪಾಟೀಲರ ಪಾಲಾಯಿತು. ಐ.ಎಸ್. ಪಾಟೀಲ ಜೊತೆ ಇನ್ನೂ ಕೆಲವರ ಹೆಸರು ಕೇಳಿಬರುತ್ತಿದೆ.

ಬ್ಯಾಂಕ್​ನ 20 ನಿರ್ದೇಶಕರ ಪೈಕಿ 8 ಜನ ಅವಿರೋಧವಾಗಿ, 12 ಜನ ಚುನಾವಣೆ ಮೂಲಕ ಜಯ ಗಳಿಸಿದ್ದಾರೆ.ಕಳೆದ ಆಡಳಿತ ಮಂಡಳಿ 10-11-2013ರಂದು ಅಸ್ತಿತ್ವಕ್ಕೆ ಬಂದಿತ್ತು. ಹೀಗಾಗಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ಬರುವ ,ನ. 10ರೊಳಗೆ ಆಗಬೇಕಿದೆ. ಚುನಾವಣಾಧಿಕಾರಿಯವರು ಶೀಘ್ರದಲ್ಲೇ ಅಧಿಸೂಚನೆ ಪ್ರಕಟಿಸುವ ಸಾಧ್ಯತೆ ಇದೆ……