ಶ್ರೀನಗರ:
ಪುಲ್ವಾಮಾ ದಾಳಿ ಹಿಂದಿನ ಉಗ್ರರನ್ನ ಭಾರತೀಯ ಸೇನೆ ಫಿನಿಶ್ ಮಾಡಿದೆ. ಕಳೆದ ನಾಲ್ಕು ದಿನದಿಂದ ಸೇನೆ ನಡೆಸಿರುವ ಆಪರೇಷನ್ ಬಗ್ಗೆ ಇಂದು ಶ್ರೀನಗರದಲ್ಲಿ ಲೆಪ್ಟಿನೆಂಟ್ ಜನರಲ್ ಕೆಜಿಎಸ್ ದಿಲ್ಹೋನ್ ಸುದ್ದಿಗೋಷ್ಠಿ ನಡೆಸಿ, ಕಳೆದ 100 ಗಂಟೆಯಲ್ಲೇ ಪುಲ್ವಾಮಾ ದಾಳಿಯ ಹಿಂದಿನ ರೋವಾರಿಗಳನ್ನ ಹತ್ಯೆ ಮಾಡಿದ್ಧೇವೆ. ನಮ್ಮ ಯೋಧರು ನಿರಂತರವಾಗಿ ಆಪರೇಷನ್ ಮಾಡಿ ಉಗ್ರರನ್ನ ಹುಡಿಕಿ ಹತ್ಯೆಗೈದಿದ್ದಾರೆ ಎಂದ್ರು.
ಅಬ್ದುಲ್ ಘಾಜಿ ಮತ್ತು ಕಮ್ರಾನ್ ಪಾಕ್ನ ಐಎಸ್ಐ ಮತ್ತು ಜೈಷ್ ಇ ಮೊಹ್ಮದ್ ಸಂಘಟನೆಯಿಂದ ತರಬೇತಿ ಪಡೆದುಕೊಂಡಿದ್ದರು. ಘಾಜಿ ಪುಲ್ವಾಮ ಘಟನೆಯ ಮಾಸ್ಟರ್ ಮೈಂಡ್ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ನಾವು ಕೆಲವು ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದೇವೆ. ಎಲ್ಲಾ ಮಾಹಿತಿಯನ್ನೂ ಈಗ ಬಹಿರಂಗ ಮಾಡೋದು ಸರಿಯಲ್ಲಿ ಎಂದು ಹೇಳಿದ್ರು. ಜೆಇಎಂ ಪಾಕ್ ಸೇನೆಯ ಶಿಶು ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಸಿಆರ್ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ…